Nataraj gowda

ಪದವೀಧರರೇ ನಿಮಗಿದೊ ವಿಶೇಷ ಹಕ್ಕು!..
ಜನರಿಂದ ಜನರಿಗಾಗಿ ಜನರಿಗೋಸ್ಕರ ಪ್ರಜಾಪ್ರಭುತ್ವ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಪ್ರಜಾಪ್ರಭುತ್ವದ ಯಶಸ್ಸು ನಿಂತಿರುವುದು ಪ್ರಜೆಗಳ ಭಾಗವಹಿಸುವಿಕೆಯಲ್ಲಿ ಪ್ರಜೆಗಳು ಭಾಗವಹಿಸಬೇಕಾದಲ್ಲಿ ಅವರಿಗೆ ಸರಿಯಾದ ಮಾಹಿತಿಜ್ಞಾನ ಬಹಳ ಮುಖ್ಯ . ಭಾರತದಂತಹ ದೊಡ್ಡ ಪ್ರಜಾಪ್ರಭುತ್ವದ ನಾಗರೀಕರಿಗೆ ಈ ವ್ಯವಸ್ಥೆಯಲ್ಲಿನ ಅವರ ಹಕ್ಕುಗಳು, ನಿಬಂಧನೆಗಳು, ಮತ್ತು ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದೇ ಅವರನ್ನು ನಮ್ಮ ಸಮಾಜದ ಆಗುಹೋಗುಗಳಿಂದ ಭಾಗವಹಿಸದಂತೆ ತಡೆಯುತ್ತಿದೆ. ಈ ಲೇಖನದ ಮೂಲಕ ನಮ್ಮ ಪದವೀಧರ ನಾಗರೀಕರಿಗೆ ಇರುವ ಒಂದು ವಿಶೇಷಮತದಾನದ ಹಕ್ಕಿನ ಬಗ್ಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದಿಂದ ಸ್ಪರ್ದಿಸಚ್ಚಿಸುತ್ತಿರುವಏ.ಎನ್ ನಟರಾಜಗೌಡ ನಮ್ಮ ಜೊತೆ ಮಾತುಕತೆಯಲ್ಲಿ ಪದವೀಧರ ಕೇತ್ರದ ವಿಶೇಷತೆಗಳ ಬಗ್ಗೆ ಹಂಚಿಕೊಂಡಿದ್ದಾರೆ. ಅದೇನೆಂದು ಮುಂದೆ ತಿಳಿಯೋಣ

ಪದವೀಧರ ಕ್ಷೇತ್ರದ ಬಗ್ಗೆ ಸರಳವಾಗಿ ಹೇಳಬೇಕೆಂದರೆ ನಮ್ಮ ರಾಜ್ಯದಲ್ಲಿ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಎಂಬಎರಡು ಆಡಳಿತ ಮನೆಗಳಿವೆ. ವಿಧಾನ ಸಭೆಯಲ್ಲಿ 224 ಶಾಸಕರು ಜನರಿಂದ ಆಯ್ಕೆಯಾಗುತ್ತಾರೆ. ವಿಧಾನ ಪರಿಷತ್ತಿನಲ್ಲಿ 75 ಜನ ಸದಸ್ಯರಿರುತ್ತಾರೆ. ಅವರಲ್ಲಿ 64 ಜನ ಸದಸ್ಯರನ್ನು ಶಾಸಕರು ಮತ್ತು ಸಾಮಾನ್ಯ ಜನರು ಆಯ್ಕೆ ಮಾಡಿದರೆ,ಉಳಿದ 11 ಜನರನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ. ಈ 64 ಜನ ಶಾಸಕರಲ್ಲಿ 7 ಜನರನ್ನು ಪದವಿಧರರು ಆಯ್ಕೆ ಮಾಡುವ ಅವಕಾಶವಿದೆ ಅದನ್ನು ಪದವೀಧರ ಕ್ಷೇತ್ರವೆಂದು ಕರೆಯಲಾಗುವುದು. ಕರ್ನಾಟಕವನ್ನು 7 ಕ್ಷೇತ್ರಗಳಾಗಿ ವಿಂಗಡಿಸಿ ಒಂದೊಂದು ಕ್ಷೇತ್ರದ ಪದವೀಧರರು ಆಯ್ಕೆಮಾಡುವ ಒಬ್ಬ ಸದಸ್ಯ ವಿಧಾನ ಪರಿಷತ್ ಸದಸ್ಯನಾಗುತ್ತಾನೆ. ಹೀಗೆ 7 ಕ್ಷೇತ್ರಗಳಿಂದ 7 ಸದಸ್ಯರನ್ನು ಆಯಾ ಕ್ಷೇತ್ರದ ಪದವೀಧರರು ಆಯ್ಕೆ ಮಾಡಬಹುದು. ಹಾಗಾದರೆ ಪದವಿಧರರೆಂದರೆ ಯಾರು ಎಂಬುದನ್ನು ಮೊದಲು ತಿಳಿಯಬೇಕು. ಭಾರತ ಸರ್ಕಾರದಿಂದ ಅನುಮೊದನೆ ಪಡೆದಿರುವ ಯವುದೇ ವಿಶ್ವವಿದ್ಯಾಲಯದಿಂದ ಮೂರು ವರ್ಷದ ಪದವಿ ವ್ಯಾಸಂಗ ಮಾಡಿದರವನ್ನು ಪದವಿಧರರೆಂದು ಪರಿಗಣಿಸಬಹುದು. ಆದರೆ ಪದವೀಧರ ಕ್ಷೇತ್ರದಲ್ಲಿ ಮತಹಾಕಲು ಪದವಿ ಮುಗಿಸಿ ಮೂರು ವರ್ಷ ಕಳೆದಿರಬೇಕು. ಕಾಯ್ದೆಗಳನ್ನು, ನಿಯಮಗಳನ್ನು, ಯೋಜನೆಗಳನ್ನು ರೂಪಿಸುವುದು ವಿಧಾನ ಪರಿಷತ್ತಿನ ಮುಖ್ಯ ಕಾರ್ಯವಾಗಿದೆ. ಒಂದು ಕಾಯ್ದೆಯೆಂಬುದು ಎಲ್ಲ ಜನರಿಗೆ ಅನ್ಚಯವಾಗುವಂತಹದ್ದು ಅಂತಹ ಕಾಯ್ದೆಯನ್ನು ಜವಬ್ದಾರಿಯುತವಾಗಿ ತರುವುದು ಬಹಳ ಮುಖ್ಯವಾಗಿರುತ್ತದೆ.ಅದಕ್ಕಾಗಿ ವೈಜಾÐನಿಕವಾಗಿ,ದೂರದೃಷ್ಟಿಯಿಂದ ಕಾಯ್ದೆಗಳ ಸೃಷ್ಟಿಯಾಗಬೇಕೆಂಬ ಕಾರಣಕ್ಕೆ ಶಿಕ್ಷಣ ಹೊಂದಿದವರಿಂದಲೇ ಶಿಕ್ಷಣ ಉಳ್ಳ ಸದಸ್ಯರನ್ನು ಆಯ್ಕೆಮಾಡುವುದಕ್ಕೆ ಈ ಪದವೀಧರ ಕ್ಷೇತ್ರವಿದೆ.ಆದರೆ ಎಷ್ಟು ಜನ ಈ ಕ್ಷೇತ್ರಕ್ಕೆ ಮತಹಾಕುತ್ತಾರೆ ಎಂದು ನೋಡಹೋದರೆ ಅದು ಬೆರಳೆಣಿಕೆಯಷ್ಟು ಅಷ್ಟೇ.ಇಂತಹ ಪದವೀಧರ ಕ್ಷೇತ್ರದಬಗ್ಗೆ ಮಾಹಿತಿನೀಡುತ್ತ ಪ್ರತಿವರ್ಷ ಸಾಕಷ್ಟು ಪದವಿಧರರನ್ನು ಈ ಕ್ಷೇತ್ರದ ಮತದಾರರಾಗಿ ನೊಂದಾಯಿಸಿಕೊಳ್ಳುವಂತೆ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿರುವ ಎ.ಎನ್ ನಟರಾಜ್ಗೌಡರ ಕೊಡುಗೆ ಗಣನೀಯವಾದದ್ದು.ವಿಜ್ಞಾನ ಪದವಿಧರರಾಗಿರುವ ಇವರು , ದೂರಶಿಕ್ಷಣದ ಮೂಲಕ ಮಾನವಸಂಪನ್ಮೂಲ ವಿಷಯದಲ್ಲಿ ಎಂ.ಬಿ.ಎ ಪದವಿ ಪಡೆದುಕೊಂಡಿದ್ದಾರೆ.ವಿದ್ಯಾರ್ಥಿ ಜೀವನದಲ್ಲೆ ಸಾಕಷ್ಟು ಸಮಾe ಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು.ನಂತರದಲ್ಲು ಪೂರ್ಣಪ್ರಮಾಣದಲ್ಲಿ ಸಮಾಜ ಸೇವೆಯಲ್ಲೆ ತೊಡಗಿದ್ದಾರೆ.ಕಾಂಗ್ರೆಸ್ ಪಕ್ಷದ ಸೈದ್ದಾಂತಿಕ ಅನುಯಾಯಿಯಾಗಿರುವ ಇವರು,2010 ರಲ್ಲಿ ಕೊಟ್ಟಿಗೆಪಾಳ್ಯ ವಾರ್ಡಿನ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ದಿಸಲು ಇಚ್ಚಿಸಿದವರು. ಹಣಕಾಸಿನ ಕೊರತೆಯಿಂದ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪಡೆದುಕೊಳ್ಳಲಾಗದ ಕಂಪ್ಯೂಟರ್ ತರಬೇತಿಯನ್ನು ಬೇರೆ ವಿದ್ಯಾರ್ಥಿಗಳಾದರು ಪಡೆದುಕೊಳ್ಳಲಿ ಎಂಬ ಮಹತ್ವಕಾಂಕ್ಷೆಯಿಂದ 2004 ರಲ್ಲಿ ಕಂಪ್ಯೂಟರ್ ಕೋರ್ಸಗಳ ಜೊತೆಗೆ ಕೌಶಲ್ಯಾಭಿವೃದ್ದಿ ತರಗತಿಗಳನ್ನು ಕರ್ನಾಟಕದಾದ್ಯಂತ 70 ಶಾಖೆಗಳಲ್ಲಿ ಶುರುಮಾಡಿ, ಸುಮಾರು ಒಂದು ಲಕ್ಷ ಜನಕ್ಕೆ ತರಬೇತಿ ಕೊಟ್ಟಿರುವುದಲ್ಲದೆ ,ಸುಮಾರು 15ಸಾವಿರ ಜನಕ್ಕೆ ಉದ್ಯೋಗ ಒದಗಿಸಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.ಇವತ್ತಿಗು ಈ ತರಬೇತಿಗಳು ಸಾಕಷ್ಟು ಯುವಜನತೆಗೆ ದಾರಿದೀಪವಾಗಿದೆ.ಯುವಸ್ಕರ ಶಿಕ್ಷಣ ಮತ್ತು ಉದ್ಯೋಗದ ವಿಷಯದಲ್ಲಿ ಏನಾದರು ಸೇವೆ ಮಾಡಬೇಕೆಂಬ ಹೆಬ್ಬಯಕೆಯಿಂದ ವಿಧಾನಪರಿಶತ್ತಿನ ಸದಸ್ಯರಾಗಲು ಇಚ್ಚಿಸಿದ್ದಾರೆ.ಹಾಗು ಈ ರಾಜಕೀಯ ವೇದಿಕೆಯನ್ನು ಉತ್ತಮ ಸೇವೆಗಾಗಿ ಬಳಸಿಕೊಳ್ಳುವ ಗುರಿಹೊಂದಿದ್ದಾರೆ.

ಅವರ ಆಕಾಂಕ್ಷೆ ಈಡೇರಲಿ ಮತ್ತು ಮುಂಬರುವ ಚುನಾವಣೆಗೆ ಶುಭವಾಗಲಿ ಎಂದು ಃಠಿಚಿಛಿ ಮುಖಾಂತರ ನಾವು ಕೋರುತ್ತೇವೆ.ಹಾಗೆ ಪ್ರಜಾಪ್ರಭುತ್ವದ ರೆಂಬೆಗಳಾಗಿರುವ ನಾವೆಲ್ಲರು ಬರೀ ಧೂಷಿಸುವುದನ್ನು ಬಿಟ್ಟು ಮೊದಲು ನಾವು ನಮ್ಮ ಕರ್ತವ್ಯಗಳನ್ನು ಸರಿಯಾಗಿ ನೆರವೇರಿಸಬೇಕಾಗಿದೆ.ಅದಕ್ಕಾಗಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳೋಣ ಹಾಗೆ ನಮ್ಮ ಮತ ಚಲಾಯಿಸುವ ಹಕ್ಕನ್ನು ನಮ್ಮ ಏಳಿಗೆಗಾಗಿ ನಾವು ಬಳಸಿಕೊಳ್ಳೋಣ.
-ಹನುಮಂತ.ಎ.ದುರ್ಗದ್