ಪದವೀಧರರೇ ನಿಮಗಿದೊ ವಿಶೇಷ ಹಕ್ಕು!..

Nataraj gowda ಪದವೀಧರರೇ ನಿಮಗಿದೊ ವಿಶೇಷ ಹಕ್ಕು!.. ಜನರಿಂದ ಜನರಿಗಾಗಿ ಜನರಿಗೋಸ್ಕರ ಪ್ರಜಾಪ್ರಭುತ್ವ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಪ್ರಜಾಪ್ರಭುತ್ವದ ಯಶಸ್ಸು ನಿಂತಿರುವುದು ಪ್ರಜೆಗಳ ಭಾಗವಹಿಸುವಿಕೆಯಲ್ಲಿ ಪ್ರಜೆಗಳು ಭಾಗವಹಿಸಬೇಕಾದಲ್ಲಿ ಅವರಿಗೆ ಸರಿಯಾದ ಮಾಹಿತಿಜ್ಞಾನ ಬಹಳ ಮುಖ್ಯ . ಭಾರತದಂತಹ ದೊಡ್ಡ ಪ್ರಜಾಪ್ರಭುತ್ವದ ನಾಗರೀಕರಿಗೆ ಈ ವ್ಯವಸ್ಥೆಯಲ್ಲಿನ ಅವರ ಹಕ್ಕುಗಳು, ನಿಬಂಧನೆಗಳು, ಮತ್ತು ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದೇ ಅವರನ್ನು ನಮ್ಮ ಸಮಾಜದ ಆಗುಹೋಗುಗಳಿಂದ ಭಾಗವಹಿಸದಂತೆ ತಡೆಯುತ್ತಿದೆ. ಈ ಲೇಖನದ ಮೂಲಕ ನಮ್ಮ ಪದವೀಧರ ನಾಗರೀಕರಿಗೆ ಇರುವ ಒಂದು ವಿಶೇಷಮತದಾನದ ಹಕ್ಕಿನ ಬಗ್ಗೆ [...]