ಪ್ರಜಾಪ್ರಭುತ್ವದಲ್ಲಿ ಮತದಾನ ಹಾಗೂ ಚುನಾವಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮತದಾನವು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ಭಾರತೀಯ ಸಂವಿಧಾನ ನೀಡಿರುವ ಒಂದು ಬಲವಾದ ಅಸ್ತ್ರ. ಸಮಾಜದಲ್ಲಿ ಏನೇ ಬದಲಾವಣೆ ತರಬೇಕೆಂದರು ಮುಕ್ತ ಮತದಾನದಿಂದ ಮಾತ್ರ ಸಾಧ್ಯ, ಸಂವಿಧಾನವು ಹೇಳುವ ಪ್ರಕಾರ ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಂತೆಯೇ ನಡೆಯಬೇಕು. ಪ್ರಜೆಗಳಿಗೆ ಸರಕಾರವನ್ನು ಸ್ಥಾಪಿಸುವ ಮತ್ತು ಅಧಿಕಾರದಿಂದ ಕೆಳಗಿಸುವ ಹಕ್ಕನ್ನು ಮತದಾನವು ನೀಡಿದೆ.
ಕರ್ನಾಟಕದ ಜನಸಂಖ್ಯೆಯು ಸುಮಾರು ಆರು ಕೋಟಿ ಇದೆ, ಇವರಲ್ಲಿ ಕರ್ನಾಟಕ ಚುನಾವಣಾ ಆಯೋಗ 2018ರ ಪರಿಕ್ಷøತ ಮತದಾರರ ಕರಡು ಪ್ರತಿಯ ಪ್ರಕಾರ ಮತದಾನದ ಹಕ್ಕು ಪಡೆದಿರುವವರು ಸುಮಾರು 4.9 ಕೋಟಿಯಷ್ಟು,  ಬೆಂಗಳೂರಿನ ಜನಸಂಖ್ಯೆಯು ಸುಮಾರು 1.2ಕೋಟಿಯಷ್ಟಿದ್ದರೆ, ಇವರಲ್ಲಿ ಮತದಾನದ ಹಕ್ಕನ್ನು ಪಡೆದವರು 85,92,815 (ಎಂಬತ್ತು ಐದು ಲಕ್ಷದ ತೊಂಬತ್ತೆರಡು ಸಾವಿರದ ಎಂಟುನೂರ ಅದಿನೈದು) ಪ್ರಜೆಗಳು.
 2008 ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 47.22% ಮತದಾನವಾಗಿತ್ತು, 2013 ರಲ್ಲಿ 58.27% ಮತದಾನವಾಗಿತ್ತು,  ಗ್ರಾಮೀಣ ಪ್ರದೇಶಗಳಿಗೆ ಗಮನಿಸದರೆ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣವು ಕಡಿಮೆಯಾಗಿರುತ್ತದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಸಿಟಿಯಲ್ಲಿ ವಾಸಿಸುವ ಪ್ರಜೆಗಳು ಬಹಳಷ್ಟು ಮಂದಿ ವಲಸೆ ಬಂದಿರುವವರು, ಬೆಂಗಳೂರು ನಗರ ನಮಗೆ ಸೇರಿಲ್ಲ ಎಂಬ ಮನೋಭಾವ ಹೊಂದಿರುವವರು, ನನ್ನ ಒಂದು ಮತದಿಂದ ನಗರವನ್ನ ಬದಲಾವಣೆ ಮಾಡಲಾಗುವುದಿಲ್ಲ ಎಂಬ ನಿರಾಶವಾದ, ರಾಜಕಾರಣಿಗಳೆಲ್ಲ ಒಂದೇ ಯಾರನ್ನೂ ನಂಬಲು ಸಾಧ್ಯವಿಲ್ಲ ಎಂಬ ಮನೋಭಾವ, ಐ ಹೇಟ್ ಪೋಲಿಟಿಕ್ಸ್ ಎಂಬ ನುಡಿ ಈಗೇ ಹಲವಾರು ಕಾರಣಗಳು.
  ಈ ನಿಟ್ಟಿನಲ್ಲಿ ಮತದಾನದ ಪಾವಿತ್ರ್ಯದ ಬಗ್ಗೆ ಜಾಗೃತಿ ಮೂಡಿಸಿ, ಮತದಾನದಿಂದ ಮಾತ್ರ ಬದಲಾವಣೆ ಸಾಧ್ಯ ಎಂಬುದನ್ನು ಅರಿವು ಮೂಡಿಸಿ ಇನ್ನೂ ಮತದಾರರಾಗಿ ನೋಂದಾವಣೆಯಾಗದಿದ್ದವರನ್ನು ನೋಂದಾಯಿಸಲು ಬಿ.ಪ್ಯಾಕ್ ( ಬೆಂಗಳೂರು ರಾಜಕೀಯ ಕಾರ್ಯಕಾರಿ ಸಮಿತಿ) ಸಂಸ್ಥೆಯು ಒನ್ ಮಿಲಿಯನ್ ನ್ಯೂ ವೋಟರ್ಸ್ ಎಂಬ ಅಭಿಯಾನಕ್ಕೆ ಬಿ.ಬಿ.ಎಂ.ಪಿ. ಸಹಯೋಗದೊಂದಿಗೆ ಆರಂಭಿಸಿತು. ಈ ಅಭಿಯಾನವನ್ನು ಬಿ.ಬಿ.ಎಂ.ಪಿ. ಆಯುಕ್ತರಾದ ಶ್ರೀಯುತ ಎಂ.ಎನ್.ಮಂಜುನಾಥ್ ಪ್ರಸಾದ್‍ರವರು, ಬಿ.ಪ್ಯಾಕ್ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಕೆ.ಜಯರಾಜ್‍ರವರು ಹಾಗೂ ಅನೇಕ ಗಣ್ಯರು ಸ್ವಾಮಿ ವಿವೇಕನಂದ ಕಾಲೇಜಿನಲ್ಲಿ ಚಾಲನೆ ನೀಡಿದರು.  ಬೆಂಗಳೂರಿನ ಯುವಜನರು ಹೆಚ್ಚಿನದಾಗಿ ಮತದಾರರನ್ನಾಗಿ ನೊಂದಾಯಿಸಬೇಕೆಂಬುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪ್ರಜಾಪ್ರಭುತ್ವದಲ್ಲಿ ಭಾಗಿಯಾದರೆ ಮಾತ್ರ ಉತ್ತಮ ಆಡಳಿತ ನೋಡಬಹುದು ಎಂಬುದೇ ಇದರ ಮುಖ್ಯ ಉದ್ದೇಶವಾಗಿತ್ತು.  ಪದವಿ, ಮೆಡಿಕಲ್, ಮ್ಯಾನೆಜ್‍ಮೆಂಟ್ ಹಾಗೂ ಇಂಜಿನಿಯರಿಂಗ್‍ಕಾಲೇಜುಗಳಲ್ಲಿ ಈ ಅಭಿಯಾನವನ್ನು ಆರಂಭಿಸಿ 18 (ಹದಿನೆಂಟು) ವರ್ಷತುಂಬಿದ ಪ್ರತಿಯೊಬ್ಬರೂ ಮತದಾರರಾಗಿ ನೋಂದಾವಣೆ ಮಾಡಲು ಅನುವು ಮಾಡಲಾಯಿತು. ಇಲ್ಲಿಯ ವರೆಗೂ ಬೆಂಗಳೂರಿನ ಸುಮಾರು 20ಕ್ಕೂ ಹೆಚ್ಚಿನ ಕಾಲೇಜುಗಳಲ್ಲಿ, 16ಕ್ಕೂ ಹೆಚ್ಚಿನ ಅಪಾರ್ಟ್‍ಮೆಂಟ್‍ಗಳಲ್ಲಿ, 20ಕ್ಕೂ ಹೆಚ್ಚು ಬೂತ್ ಗಳಲ್ಲಿ, ಈವರೆಗೆ 60ಕ್ಕೂ ಹೆಚ್ಚಿನ  ಅಭಿಯಾನವನ್ನು ಬಿ.ಪ್ಯಾಕ್ ಸಂಸ್ಥೆಯ ನಾಯಕರುಗಳು ಬಿ.ಬಿ.ಎಂ.ಪಿ.ಸಹಯೋಗದೊಂದಿಗೆ ಹಮ್ಮಿಕೊಂಡು ಸುಮಾರು 15 ಸಾವಿರಕ್ಕೂ ಹೆಚ್ಚಿನ ನಾಗರೀಕರನ್ನು ಮತದಾರರನ್ನಾಗಿ ನೊಂದಾಯಿಸುವಲ್ಲಿ ಬಿ.ಬಿ.ಎಂ.ಪಿ. ಜೊತೆ ಕೈಜೊಡಿಸಿದ್ದಾರೆ.
ದುರಂತವೆಂದರೆ ವಿದ್ಯಾವಂತರು ಮತ್ತು ಯುವಕರಲ್ಲಿ ಮತದಾನದ ಬಗ್ಗೆ ಆಸಕ್ತಿ ಇಲ್ಲದಿರುವುದು ಕಂಡು ಬಂದಿತು. ಆಸಕ್ತಿ ಇದ್ದರೂ ಸಹ ಮತದಾನದ ಗುರುತಿನ ಚೀಟಿ ಮಾಡಿಸಲು ಇದ್ದ ತೊಡಕುಗಳ ಬಗ್ಗೆ ಅವರಿಗೆ ಬೇಸರವಿತ್ತು, ಹೊಸದಾಗಿ ನೋಂದಾವಣೆ ಮಾಡಲು ಯಾವ ಅರ್ಜಿ ಉಪಯೋಗಿಸಬೇಕು ಎಂಬುದರ ಗೊಂದಲ, ಅರ್ಜಿಗಳನ್ನು ಹೇಗೆ ಭರ್ತಿ ಮಾಡಬೇಕೆಂಬುದರ ಬಗ್ಗೆ ಅರಿವು ಇಲ್ಲದಿರುವುದು, ಬಹಳ ಸಲ ಬಿ.ಬಿ.ಎಂ.ಪಿ.ಗೆ ಅರ್ಜಿಗಳನ್ನು ನೀಡಿದ್ದರೂ ಮತದಾರರಾಗಿ ನೋಂದಾವಣೆ ಆಗದಿರುವುದು, ಮತದಾರರಾಗಿ ನೋಂದಾಯಿಸಲು ಯಾವ ದಾಖಲೆಗಳನ್ನು ಒದಗಿಸಬೇಕೆಂಬುದರ ಗೊಂದಲ, ಸೂಕ್ತ ದಾಖಲೆಗಳು ಅವರ ಬಳಿ ಇಲ್ಲದಿರುವುದು, ಮತದಾನದ ಗುರುತಿನ ಚೀಟಿ ಇದೆ ಆದರೆ ಮತದಾನದ ಪರಿಕ್ಷøತ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು, ಅವರ ವಾಸಸ್ಥಾನ ಯಾವ ವಾರ್ಡಿಗೆ ಸೇರಿದೆ ಎಂಬುದು ತಿಳಿದಿಲ್ಲದಿರುವುದು, ಸುಮಾರು ಮಂದಿ ಹಾಸ್ಟಿಲ್ ಹಾಗೂ ಪಿ.ಜಿ.ಗಳಲ್ಲಿ ವಾಸವಾಗಿರುವುದು, ನನ್ನ ಒಂದು ಮತದಾನದಿಂದ ಏನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬ ನಿರಾಶಾವಾದ  ಈ ಎಲ್ಲ ತೊಡಕುಗಳನ್ನು ನಿವಾರಿಸಿ ಅವರನ್ನು ಮತದಾರರಾಗಿ ನೋಂದಾಯಿಸಿಕೊಳ್ಳುವುದೇ ಬಿ.ಪ್ಯಾಕ್ ಸಂಸ್ಥೆಯ ಮುಂದಿದ್ದ ದೊಡ್ಡ ಸವಲಾಗಿತ್ತು.
ಈ ಸಮಸ್ಯೆಗಳು ವಸ್ತುಸ್ಥಿತಿಯಲ್ಲಿ ಕಂಡರೂ, ಸಮಸ್ಯೆಗಳಿಗೆ ಪರಿಹಾರ ಕಂಡಹಿಡಿದು, ಯುವಕರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಅವರಲಿದ್ದ ಗೊಂದಲಗಳಿಗೆ ತೆರೆ ಎಳೆದು, ಅವರಿಗೆ ಅರ್ಜಿಗಳನ್ನು ಹೇಗೆ ಭರ್ತಿ ಮಾಡಬೇಕೆಂದು ತಿಳಿಸಿ, ಅವರ ಅರ್ಜಿ ಯಾವ ಕಾರಣಕ್ಕೂ ಬಿ.ಬಿ.ಎಂ.ಪಿ.ಯವರು ತಿರಸ್ಕರಿಸದಂತೆ ಅವರಿಂದಲೆ ಭರ್ತಿ ಮಾಡಿಸಿ, ಬಿ.ಪ್ಯಾಕ್ ಸದಸ್ಯರು ಅರ್ಜಿಗಳನ್ನು ಪರಿಶೀಲಿಸಿ ಬಿ.ಬಿ.ಎಂ.ಪಿ. ಕಛೇರಿಗೆ ಸಲ್ಲಿಸಿ ಮತದಾನವು ಪ್ರಜೆಗಳ ಪರಮಾಧಿಕಾರದ ಸಂಕೇತವಾಗಿದೆ ಎಂಬ ಸಂದೇಶವನ್ನು ಸಾರಿ, ಸುಮಾರು 15 ಸಾವಿರಕ್ಕೂ ಹೆಚ್ಚು ಬೆಂಗಳೂರಿನ ಯುವಕರನ್ನು ಮತದಾರರಾಗಿ ನೊಂದಾಯಿಸಿಕೊಳ್ಳಲು ಪ್ರೆರೇಪಿಸಿ, ಪ್ರಜಾÐವಂತ ನಾಗರೀಕರನ್ನಾಗಿ ಮಾಡುವಲ್ಲಿ ಈ ಅಭಿಯಾನವು ಮಹತ್ವದ ಪಾತ್ರವಹಿಸಿದೆ.
ಪ್ರಜೆಗಳು ಮತದಾನದ ಗುರುತಿನ ಚೀಟಿ ಪಡೆದು ಮತದಾರರಾಗಿ ನೊಂದಾಯಿಸಿಕೊಂಡರೆ ಸಾಲದು, ಚುನಾವಣೆಯ ದಿನದಂದು ಮತಗಟ್ಟೆಗಳಿಗೆ ಬಂದು ಮತದಾನ ಮಾಡಿದಾಗ ಮಾತ್ರ ನಾವು ಅಂದುಕೊಂಡಂತಹ ದೇಶವನ್ನು ಕಟ್ಟಲು ಸಾಧ್ಯ.