ಅದು ಸೂರ್ಯಮರೆಯಾಗುವ ಸಮಯ, ತಮ್ಮ ಕೆಲಸವನ್ನು ಮುಗಿಸಿ ಮನೆಯತ್ತ ಹೊರಡುವಾಗ,ಬಸ್ಸಾಗಾಗಿ ಕೆಂಪೇಗೌಡ ಬಸ್ಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯತ್ತ ಒಬ್ಬ ಪುರುಷ ಸಹ್ನೆ ಮಾಡಿದ,ದುಡ್ಡು ತೋರಿಸಿ ಅಸಭ್ಯವಾಗಿ ವರ್ತಿಸಿದ. ಯುವತಿ ಧೈರ್ಯಗೆಡದೆ ಅವನನ್ನು ಎದುರಿಸಿ, ಬೈದಾಗ,ಅಲ್ಲಿದ ಕಾಲ್ಕಿತನ್ನು.ಇಂತ ಸನ್ನಿವೇಶವನ್ನು ಎದುರಿಸಿದ ಆಕೆ ತನ್ನ ಧೈರ್ಯವನ್ನು ತಾನೇ ಮೆಚ್ಚಿ ಕುಳಿತ ಎರೆಡೆ ನಿಮಿಷದಲ್ಲೇ, ಆತ ಮತ್ತೊಬ್ಬ ದಾಂಡಿಗನ ಜೊತೆ ಬಂದು ಇನ್ನೂ ಅಸಭ್ಯವಾಗಿ ವರ್ತಿಸತೊಡಗಿದ, ಭಯಗೊಂಡ ಯುವತಿ ವೇಗವಾಗಿ ಬಸ್ಸ್ ಹತ್ತಿ ತನ್ನ ಪಾಡಿಗೆ ಹೊರಟಳು.ಇದು ಯಾವುದೇ ಕಟ್ಟು ಕಥೆಯಲ್ಲ. ಇದು ದಿನ ನಿತ್ಯ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆ. ಚಿತ್ರ ಎಂಬ ಯುವತಿ ತನಗಾಗಿದ್ದ ಕಹಿ ಘಟನೆಯನ್ನು ನರೆದ ಮಹಿಳೆಯರ ಎದುರು ತೆರೆದಿಟ್ಟಳು.

ರೀತಿಯ ಘಟನೆಗಳು ನಮ್ಮ ಸುತ್ತ ಮುತ್ತ ನಡೆದರು ನಾವು ಕಣ್ನೀದ್ದರು ಕುರುಡರಂತೆ ವರ್ತಿಸುತ್ತೇವೆ. ನಮ್ಮಲ್ಲಿ ಎಷ್ಟು ಜನ ಮಹಿಳೆಯರು ಈತರಹದ ಅನುಭವವನ್ನು ಧೈರ್ಯವಾಗಿ ಬಿಚ್ಚಿಡುತ್ತಾರೆ? ಅಂತ ಕೇಳೋದಾದ್ರೆ ಅದು ಒಂದು ಪ್ರಶ್ನೆಯಾಗಿಯೇ ಉಳಿದಿದೆ.

ಒಂದು ಪ್ರಶ್ನೆಯನ್ನೇ ಮುಂದಿಟ್ಟುಕ್ಕೊಂಡು, ಇಂತಹ ಮಹಿಳೆಯರಿಗೆ ತಮ್ಮ ಜೀವನದಲ್ಲಿ ನಡೆದಂತಹ ಕಹಿ ಘಟನೆಗಳನ್ನು ಹಂಚಿಕೊಳ್ಳಲು ಒಂದು ಸಮಾನಾಂತರ ವೇದಿಕೆಯನ್ನು ಸೃಷ್ಟಿಸಲಾಗಿತ್ತು.

ಗೋವಿಂದರಾಜನದರದ,ಸುಭಾಷ್ ಚಂದ್ರ ಬೋಸ್ ಉದ್ಯಾನವನದಲ್ಲಿ ಬಿ.ಕ್ಲಿಪ್ ಸಿವಿಕ್ ಲೀಡರ್ ಆದ ಶ್ರೀಮತಿ,ಜ್ಯೋತಿ ಪ್ರಸಾದ್ರವರು ದುರ್ಗಾ ಫೌಂಡೇಶನ್ ಅಡಿಯಲ್ಲಿ ಇನ್ನಿತರೆ ಸಂಘಪರಿವಾರಗಳಾದ ಲಾಫಿಂಗ್ ಕ್ಲಬ್,ಉನ್ನತಿ ಮಹಿಳಾ ಕಲ್ಯಾಣ ಇಲಾಖೆ,ಪ್ರಪಂಚ ಆರ್ಯ ವೈಶ್ಶ ಮಾಹಾಸಭಾದ ಮಹಿಳೆಯರು ಒಟ್ಟಾಗಿ ಸೇರಿ ಮಹಿಳಾ ಸುರಕ್ಷತೆಯ ಕಾರ್ಯಗಾರವನ್ನು ಆಯೋಜಿಸಿದರು. ಕಾರ್ಯಗಾರದಲ್ಲಿ ಕೆಲವು ಸಂದರ್ಭಗಳನ್ನು ಕಲ್ಪಿಸಿ ಅದಕ್ಕೆ ಅನುಗುಣವಾಗಿ ಹೇಗೆ ಸ್ಪಂದಿಸಬೇಕು,ಅಥವಾ ಸಂದರ್ಬವನ್ನು ಹೇಗೆ ಎದುರಿಸಬೇಕು ಎಂದು ಸಂಕ್ಷಿಪ್ತವಾಗಿ ಉದಾಹರಣೆ ಸಹಿತ ತಿಳಿಸಿಕೊಡಲಾಯಿತು.

ಒದಗಿಸಿದ ವೇದಿಕೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡ ಮಹಿಳೆಯರು ತಮ್ಮ ನಿಜ ಜೀವನದಲ್ಲಿ ನಡೆದಂತಹ ಹಲವಾರು ಘಟನೆಗಳನ್ನು ಮುಕ್ತವಾಗಿ ಹಂಚಿಕೊಂಡರು. ಮಹಿಳೆ ಕೇವಲ ಹೆದರುವುದಿಲ್ಲ, ಎದುರಿಸುತ್ತಾಳೆ ಎನ್ನುವುದಕ್ಕೆ ಕಾರ್ಯಗಾರದಲ್ಲಿ ಬಂದಿದ್ದ ಮತ್ತಷ್ಟು ಮಹಿಳೆಯರೇ ಸಾಕ್ಷಿ.ಅವರು ಹಂಚಿಕೊಂಡ ಘಟನೆಗಳು ಅಲ್ಲಿ ನೆರೆದಿದ್ದ ಉಳಿದ ಮಹಿಳೆಯರನ್ನು ಬಡಿದೆಬ್ಬಿಸಿದವು.

ಮಧ್ಯರಾತ್ರಿ 1:30 ಸಮಯದಲ್ಲಿ ಬೇರೆ ಊರಿನ ಯುವತಿಯೊಬ್ಬಳನ್ನು ರೈಲ್ವೆ ಸ್ಟೇಷನ್ನಿಂದ ಕರೆ ತಂದ ಆಟೋ ಚಾಲಕ ಮತ್ತು ಅವನ ಸ್ನೇಹಿತ ಖಾಲಿ ಜಾಗವೊಂದರಲ್ಲಿ ಆಟೋ ನಿಲ್ಲಿಸಿ, ಆಕೆಯ ಮೇಲೆ ಅತ್ಯಾಚಾರವೆಸೆಗಲು ಮುಂದಾದಗ,ಯುವತಿ ಜೋರಾಗಿ ಕಿರುಚಿದಳು. ತನ್ನನ್ನು ಕಾಪಾಡಿ ಎಂದು ಪರಿ ಪರಿಯಾಗಿ ಬೇಡಿದಳು. ಅದನ್ನು ಕೇಳಿದ ಶ್ರೀಮತಿ ಕಾವ್ಯ, ಧೈರ್ಯಗೆಡದೆ ಪೋಲಿಸರಿಗೆ ಕರೆ ಮಾಡಿ, ಘಟನೆಯನ್ನು ವಿವರಿಸಿ,ದುಷ್ಕರ್ಮಿಗಳನ್ನು ಸೆರೆಹಿಡಿಯಲು ಸಹಾಯ ಮಾಡಿ ಯುವತಿಯನ್ನು ರಕ್ಷಿಸಿದರು.ಬೇರೆಯವರಂತೆ ನಮಗೇಕೆ ಎಂದು ಕುಳಿತಿದ್ದರೆ ಇಂದು ಯುವತಿಯ ಕಥೆ ಏನಾಗುತ್ತಿತ್ತೋ ? ಕಾವ್ಯ ಅವರ ಸಾಹಸಿ ನಡೆ ಅಲ್ಲಿ ನೆರೆದಿದ್ದವರಿಗೆ ಒಂದು ಮಾದರಿಯಾಯಿತು.

ಇಂತಹ ವೇದಿಕೆ ಸಿಕ್ಕಲ್ಲಿ ಮಹಿಳೆಯರು ಮತ್ತಷ್ಟು ಧೃಡರಾಗುತ್ತಾರೆ,ಮುಕ್ತವಾಗಿ ಮಾತನಾಡುವ ಧೈರ್ಯ ಹೆಚ್ಚುತ್ತದೆ.ಪೋಲಿಸ್ ಸ್ಟೇಷನ್ಗೆ ಕರೆ ಮಾಡುವುದು ಅಥವಾ ಪೋಲಿಸ್ ಸ್ಟೇಷನ್ ಮೆಟ್ಟಿಲು ಏರುವುದೆ ಅಪರಾಧ ಎಂದು ಭಾವಿಸುವುದನ್ನು ನಮ್ಮ ಸಮಾಜ ತನ್ನ ಮನಸ್ಸಿನಿಂದ ಕಿತ್ತೊಗೆದರೆ ನಮ್ಮ ಸಮಾಜ ಬದಲಾಗುವುದು ಎಂದು ಜ್ಯೋತಿ ಅಭಿಪ್ರಾಯಪಟ್ಟರು.

ಇದರೊಟ್ಟಿಗೆ ಕಾರ್ಯಗಾರದಲ್ಲಿ ಸಾಹಸಿ ಮಹಿಳೆಯರನ್ನು ಗುರುತಿಸಿ ದುರ್ಗಾ ಸಂಸ್ಥೆ ರಿಯಲ್ ಹೀರೋ ಎಂದು ಘೋಷಿಸಿ ಪ್ರಮಾಣ ಪತ್ರ ಹಾಗೂ ಮೆಡೆಲ್ ನೀಡಿ ಪುರಸ್ಕರಿಸಿದರು.ಇಂತಹ ಪುರಸ್ಕಾರದಿಂದ ಮಹಿಳೆಯರಿಗೆ ಉತ್ತೇಜನ ನೀಡಿ,ಪ್ರೋತ್ಸಾಹಿಸಿ ಮತ್ತಷ್ಟು ಮಹಿಳೆಯರಿಗೆ ಸ್ಫೂರ್ತಿಯಾಗಿಸಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ.

ದುರ್ಗಾ ಸಂಸ್ಥೆಯ ಸಂಸ್ಥಾಪಕಿಯಾದ ಪ್ರಿಯಾ ವರದರಾಜನ್ ಹಿಳೆಯರಿಗೆಂದೇ ಸುಮಾರು ಬಿ.ಎಂ.ಟಿ.ಸಿಯ 150 ಬಸ್ಸಗಳಲ್ಲಿ ಬೇಕಾದ ಸುರಕ್ಷಿತಕರೆ ಘಂಟೆಹಾಗು ಇನಿತ್ತರೆ ಸೌಲಭ್ಯಗಳನ್ನು ಅಳವಡಿಸಿದ್ದಾರೆ. ಮಹಿಳೆಯ ಮೇಲೆ ಎಲ್ಲೇ ದೌರ್ಜನ್ಯ ನಡೆದರು, ಸಂಸ್ಥೆಗೆ ಕರೆ ಮಾಡಿದರೆ ತಕ್ಷಣ ಬಂದು ಸಹಾಯ ನೀಡುತ್ತಾರೆ ಹಾಗೂ ಶೋಷಣೆಗೆ ಒಳಗಾದ ಮಹಿಳೆಯರಿಗೆ ಪರಿಹಾರವನ್ನು ಒದಗಿಸುತ್ತಾರೆ.

ನಾನು ಯಾವುದೇ ಮಹಿಳೆಯನ್ನು ಅಪಾಯದಲ್ಲಿ ಕಂಡಲ್ಲಿ ಹೋಗಿ ಸಹಾಯ ಮಾಡುತ್ತೇನೆ,ನಾನು ನನ್ನ ಮಕ್ಕಳು ಹಾಗೂ ಸ್ನೇಹಿತರಲ್ಲಿ ದುರ್ಗಾ ಬಗ್ಗೆ ಅರಿವು ಮೂಡಿಸುತ್ತೇನೆ,ನನ್ನ ಮಗ ಹಾಗೂ ಸ್ನೇಹಿತರಿಗೆ ಮಹಿಳೆಯರ ಬಗೆಗಿನ ಸಕಾರಾತ್ಮಕ ವಿಚಾರಗಳನ್ನು ತಿಳಿಸುತ್ತೇನೆ. ನಾನು ಎಲ್ಲಾ ಮಹಿಳೆಯನ್ನು ಗೌರವದಿಂದ ಕಾಣುತ್ತೇನೆ.ನಾನು ದುರ್ಗಾ ಆಗಿ ಮಹಿಳೆಯರು, ದುರ್ಬಲ ಸ್ಥಿತಿಯಲ್ಲಿ ಇದ್ದದ್ದನ್ನು ಕಂಡುಬಂದ್ದಲ್ಲಿ ಸರಿಯಾಗಿ ಸ್ಪಂದಿಸುತ್ತೇನೆ,ಎಂದು ಅಲ್ಲಿ ನರೆದ್ದಿದ್ದ ಮಹಿಳೆಯರು ದುರ್ಗಾ ಸಂಸ್ಥೆಯಡಿಯಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

ದೇಶದ ಪ್ರತಿಯೊಬ್ಬ ನಾಗರಿಕನು ಸ್ವೀಕರಿಸಬೇಕಾದ ಪ್ರಮಾಣ ವಚನವಾಗಿದೆ ಎಂದು ಅಲ್ಲಿದವರು ಅಭಿಪ್ರಾಯ ಪಟ್ಟರು. ಇಂತಹ ಸಂಸ್ಥೆಗಳು ಹೆಚ್ಚುತ್ತಿರುವುದು ಮಹಿಳೆಯರ ಆತ್ಮಬಲ ವೃದ್ದಿಸುತ್ತಿದೆ.ಮಹಿಳೆಯರಿಗಾಗಿ ಮಹಿಳೆಯರೇ ಸೇರಿ ಇಂತಹ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿರುವುದು,ಪುರುಷ ಪ್ರಧಾನ ಸಮಾಜದಲ್ಲಿ ಹೆಮ್ಮೆಯ ಸಂಗತಿಯಾಗಿದೆ.

ನಮ್ಮನ್ನು ನಾವೇ ರಕ್ಷಿಸಿಕ್ಕೊಳ್ಳಬೇಕು ನಮಗಾಗಿ ನಾವೇ ಹೋರಾಡಬೇಕೆಂದು ಕಾರ್ಯಗಾರ ತಿಳಿಸಿಕೊಟ್ಟಿದೆ.ಒಟ್ಟಾರೆ ನಾವು ಸ್ವಾವಲಂಬಿಯಾಗಿ ಎಂತಹ ಸಂಧರ್ಭದವನ್ನಾದರು ಎದುರಿಸಬೇಕೆಂಬುದೇ ಕಾರ್ಯಗಾರದ ಮುಖ್ಯ ಉದ್ದೇಶ. ತರಹದ ಕಾರ್ಯಗರವನ್ನು ಹಮ್ಮಿಕೊಂಡ ಜ್ಯೋತಿಯವರಿಗೆ ಬಿ.ಪ್ಯಾಕ್ ವತಿಯಿಂದ ಶುಭಕೊರುತ್ತ, ಇನ್ನಷ್ಟು ಕಾರ್ಯಕ್ರಮಗಳಿಗೆ ಕಾರ್ಯಗಾರ ಅಡಿಪಾಯವಾಗಲಿ ಎಂದು ಆಶಿಸುತ್ತೇವೆ.

– ಸುಮಶ್ರೀ ಬಿ ಆರ್