Menu-bar-icon

ಬಿ.ಕ್ಲಿಪ್ ಕುರಿತು

ಬಿ.ಪ್ಯಾಕ್ ನಾಗರೀಕ ನಾಯಕತ್ವ ತರಬೇತಿ ಕಾರ್ಯಕ್ರಮ (ಬಿ.ಕ್ಲಿಪ್) ಬಿ.ಪ್ಯಾಕ್ ನ ಪ್ರಮುಖ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ, ನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇರುವ ಹಾಗೂ ನಗರದ ಆಡಳಿತವನ್ನು ಸುಧಾರಿಸಲು ಬಯಸುವ ಪ್ರತಿಭಾವಂತ ವ್ಯಕ್ತಿಗಳನ್ನು ಆಯ್ಕೆ ಮಾಡಿ, ತರಬೇತಿ ನೀಡಿ ಬೆಂಬಲಿಸುತ್ತದೆ. ಬಿ.ಕ್ಲಿಪ್ ಕಾರ್ಯಕ್ರಮದ ಮೂಲಕ ಆಯ್ಕೆಯಾದ ಪ್ರತಿಭಾನ್ವಿತ ವ್ಯಕ್ತಿಗಳಿಗೆ ಬೆಂಗಳೂರಿನ ನಾಗರಿಕರಿಗೆ ಮುಖ್ಯವಾದ ವಾರ್ಡ್ ಮಟ್ಟದ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡುತ್ತದೆ, ಈ ಮೂಲಕ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರುವ, ರಚನಾತ್ಮಕ ನಾಗರಿಕ ನಾಯಕರ ತಂಡವನ್ನು ಸೃಷ್ಟಿಸುವ ಗುರಿ ಹೊಂದಿದೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಜವಾಬ್ದಾರಿಯುತ ರಾಜಕಾರಣ ತರಲು ಶ್ರಮಿಸಲು ಕಾರ್ಯನಿರ್ವಹಿಸುತ್ತದೆ.

ಬಿ.ಕ್ಲಿಪ್ ನಾಯಕರುಗಳ
ಕಾರ್ಯಚಟುವಟಿಕೆಗಳ ಕುರಿತು

ಬಿ. ಕ್ಲಿಪ್ ನಾಯಕರು ನಾಗರಿಕರ ಸಹಭಾಗಿತ್ವದೊಂದಿಗೆ, ತಳಮಟ್ಟದಲ್ಲಿ ವಿನೂತನ ಕಾರ್ಯಕ್ರಮಗಳ ಮೂಲಕ ಉತ್ತಮ ಬೆಂಗಳೂರಿಗಾಗಿ ಶ್ರಮಿಸುತ್ತಿದ್ದಾರೆ

ಬಿ.ಕ್ಲಿಪ್ ಸಲಹಾ ಸಮಿತಿ

ನಮ್ಮ ಸಲಹಾ ಸಮಿತಿಯು, ಕಾರ್ಯಕ್ರಮದ ಮೂಲ ಉದ್ದೇಶವನ್ನು ತಲುಪಲು ಮಾರ್ಗದರ್ಶನ ಹಾಗೂ ಕಾರ್ಯತಂತ್ರಗಳನ್ನು ಸೂಚಿಸುತ್ತದೆ. ಈ ಸಲಹಾ ಸಮಿತಿಯು ಮಾಜಿ ಸಂಸತ್ ಸದಸ್ಯರು ಹಾಗೂ ಪ್ರಮುಖ ರಾಜಕೀಯ ಮುಖಂಡರುಗಳನ್ನು ಒಳಗೊಂಡಿದೆ. ಈ ಸದಸ್ಯರು ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ತಮ್ಮ ರಾಜಕೀಯ ಅನುಭವಗಳ ಮೂಲಕ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡುತ್ತಾರೆ.

ಬಿ.ಕ್ಲಿಪ್ ಡ್ಯಾಶ್ ಬೋರ್ಡ್

ಬಿ.ಕ್ಲಿಪ್ ನಾಯಕರುಗಳ ಒಟ್ಟು ಸಂಖ್ಯೆ

365

ಪುರುಷರು 258, ಮಹಿಳೆಯರು 107

198 ವಾರ್ಡ್ ಗಳ ಪೈಕಿ 148 ವಾರ್ಡ್ ಗಳಲ್ಲಿ ಬಿ.ಕ್ಲಿಪ್ ನಾಗರಿಕ ನಾಯಕರ ಪ್ರಾತಿನಿಧ್ಯವಿದೆ.

ಬಿ.ಕ್ಲಿಪ್ ನಾಗರಿಕ ನಾಯಕರ ಪಕ್ಷವಾರು ಪ್ರಾತಿನಿಧ್ಯ

ಕಾಂಗ್ರೆಸ್ ( ಐ ಎನ್ ಸಿ)

85

ಭಾರತೀಯ ಜನತಾ ಪಕ್ಷ (ಬಿಜೆಪಿ)

81

ಜನತಾ ದಳ (ಜಾತ್ಯಾತೀತ) (ಜೆಡಿ-ಎಸ್)

17

ಆಮ್ ಆದ್ಮಿ ಪಕ್ಷ

15

ಇತರೆ

9

ಪಕ್ಷೇತರ

158

ಬಿ.ಕ್ಲಿಪ್ ಚಾಂಪಿಯನ್ಸ್

ಬಿ.ಕ್ಲಿಪ್ ಚಾಂಪಿಯನ್ಸ್ ಸರಣಿಯು ಬಿ.ಕ್ಲಿಪ್ ನಾಗರಿಕ ನಾಯಕರ ಸಾಧನೆ ಮತ್ತು ವಿನೂತನ ಕಾರ್ಯಕ್ರಮಗಳನ್ನು ಗುರುತಿಸಿ ಉತ್ತೇಜಿಸುವ ಪ್ರಯತ್ನವಾಗಿದೆ. ನಗರದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಹಾಗೂ ಆಡಳಿತದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ಇವರ ಪಾತ್ರ ಬಹುಮುಖ್ಯವಾಗಿರುತ್ತದೆ. ಬಿ.ಕ್ಲಿಪ್ ಚಾಂಪಿಯನ್ಸ್ ನಿರ್ವಹಿಸಿರುವ ಚಟುವಟಿಕೆಗಳ ಬಗ್ಗೆ ತಿಳಿಯಿರಿ.

ಈ ಕಾರ್ಯಕ್ರಮ ಸೇರುವುದು ಹೇಗೆ ?

ಬಿ.ಕ್ಲಿಪ್ ಕಾರ್ಯಕ್ರಮದ ಅರ್ಜಿಯಲ್ಲಿ 3 ಭಾಗಗಳಿವೆ

ಹೆಚ್ಚಿಗೆ ತಿಳಿಯಿರಿ.

ಸಂಪರ್ಕಿಸಿ