Menu-bar-icon

ಬಿ.ಗ್ರೀನ್

ಬೆಂಗಳೂರು ನಗರವು ಹೊಂದಿರುವ ಉತ್ತಮ ಹವಾಮಾನ, ಉದ್ಯಾನವನಗಳು ಹಾಗೂ ಸ್ಪಂದನಾತ್ಮಕ ಸಂಸ್ಕøತಿಯು ನಗರವನ್ನು ದೇಶದ ಸಿಲಿಕಾನ್ ವ್ಯಾಲಿಯನ್ನಾಗಿ ಗುರುತಿಸಲು ಮುಖ್ಯ ಪಾತ್ರ ವಹಿಸಿವೆ. ಈ ಕಾರಣಗಳಿಂದಾಗಿ ಜಗತ್ತಿನ ಎಲ್ಲಾ ಭಾಗಗಳಿಂದ ವಿದ್ಯಾರ್ಥಿಗಳು, ವೃತ್ತಿಪರರು ಹಾಗೂ ಅವರ ಕುಟುಂಬದವರನ್ನು ನಗರವು ತನ್ನತ್ತ ಆಕರ್ಷಿಸುತ್ತಿದೆ. ತೀವ್ರ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ, ನಗರೀಕರಣದ ಗತಿಯನ್ನು ಹೆಚ್ಚಿಸುವ ಯೋಜನೆಗಳಿಂದ ನಗರದ ಹಸಿರು ಪರಿಸರ ಕ್ಷೀಣಿಸುತ್ತಿದೆ. ವೇಗವಾದ ನಗರೀಕರಣದ ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ಬೆಂಗಳೂರು ನಗರವು ತೀವ್ರತರದ ನೀರಿನ ಬಿಕ್ಕಟ್ಟು, ಅರಣ್ಯ ನಾಶ, ಘನತ್ಯಾಜ್ಯ ನಿರ್ವಹಣೆಯ ಸಮಸ್ಯೆ, ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಮಾಲಿನ್ಯ, ಸಂಪನ್ಮೂಲದ ಕೊರತೆ ಹಾಗೂ ಒಟ್ಟಾರೆಯಾಗಿ ಜೀವನ ಗುಣಮಟ್ಟದಲ್ಲಿನ ಕುಸಿತದಂತಹ ದೊಡ್ಡ ಸವಾಲುಗಳನ್ನು ಬೆಂಗಳೂರಿನ ನಾಗರೀಕರು ಎದುರಿಸಬೇಕಾಗುತ್ತದೆ.

ಬಿ.ಪ್ಯಾಕ್‍ನ ಬಿ.ಗ್ರೀನ್ ಕಾರ್ಯಕ್ರಮವು ಬೆಂಗಳೂರಿನಲ್ಲಿ ಪರಿಸರ ಸುಸ್ಥಿರತೆ, ಸಾಮಾಜಿಕ-ಆರ್ಥಿಕ ಉನ್ನತಿ, ಕ್ಷೀಣಿಸುತ್ತಿರುವ ಹವಾಮಾನ ಗುಣಮಟ್ಟದ ಚೇತರಿಕೆ ಮತ್ತು ಜೀವನ ಗುಣಮಟ್ಟ ವೃದ್ಧಿಗೊಳಿಸುವ ಉದ್ದೇಶವನ್ನು ಹೊಂದಿದೆ. ಇದನ್ನು ಸಾಧಿಸುವ ನಿಟ್ಟಿನಿಂದ ವಿಷಯ ತಜ್ಞರು, ಸರ್ಕಾರಿ ಸಂಸ್ಥೆಗಳ ಮೇಲ್ವಿಚಾರಕರು ಹಾಗೂ ನಾಗರಿಕರನ್ನೊಳಗೊಂಡು ಕಾರ್ಯಕ್ರಮಗಳು/ಚರ್ಚೆಗಳನ್ನು ನಡೆಸಿ, ಈ ಚರ್ಚೆಗಳಿಂದ ಹೊರಬರುವ ಸಲಹೆ ಸೂಚನೆಗಳನ್ನು ಬಿ.ಕ್ಲಿಪ್ ನಾಯಕರು ಮತ್ತು ಸಮುದಾಯ ಪಾಲುದಾರರ ಮೂಲಕ ತಳಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ನಮ್ಮ ಎಲ್ಲಾ ಕಾರ್ಯಕ್ರಮಗಳು ಮತ್ತು ಯೋಜನೆಗಳು ನಗರ, ರಾಜ್ಯ ಮಟ್ಟ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸುಸ್ಥಿರಾಭಿವೃದ್ಧಿ ಆದ್ಯತೆಗಳೊಂದಿಗೆ ಪ್ರತಿಪಾದಿಸುವ ದೂರದೃಷ್ಟಿಯನ್ನು ಹೊಂದಿದೆ. ಮತ್ತಷ್ಟು ತಿಳಿಯಿರಿ

ಕಾರ್ಯಕ್ರಮಗಳು  

ಬಿ.ಗ್ರೀನ್ ಕಾರ್ಯಕ್ರಮದ ಅಡಿಯಲ್ಲಿನ ವಿವಿಧ ಉಪಕ್ರಮಗಳ ಪಟ್ಟಿ ಕೆಳಕಂಡಂತಿವೆ,

ಗಾಳಿ

ಬೆಂಗಳೂರಿಗರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಶುದ್ಧ ಗಾಳಿ ನಿರ್ಣಾಯಕ. ಗಾಳಿಯ ಗುಣಮಟ್ಟ ವೃದ್ಧಿಗೆ ವಿವಧ ಸಹಭಾಗಿ ಸಂಸ್ಥೆಗಳ ಸಹಯೋಗದೊಂದಿಗೆ ಪರಿಹಾರಗಳನ್ನು ಅನುಷ್ಠಾನಗೊಳಿಸುವತ್ತ ಈ ಕಾರ್ಯಕ್ರಮವು ಗಮನ ಹರಿಸುತ್ತದೆ.

 

ನೀರು

ಬೆಂಗಳೂರು ನಗರವು ಇತ್ತೀಚಿನ ದಿನಗಳಲ್ಲಿ ತೀವ್ರತರ ನೀರಿನ ಕೊರತೆ ಎದುರಿಸುವಂತಾಗಿದೆ, ಈಗಿರುವ ಸೂಚನೆಗಳ ಪ್ರಕಾರ ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ. ನಗರಕ್ಕೆ ಮುಖ್ಯವಾಗಿರುವ, ಕುಡಿಯುವ ನೀರಿಗಾಗಿ ಈಗಿರುವ ನೀರಿನ ಮೂಲಗಳನ್ನು ಕಾಪಡಿಕೊಳ್ಳುವುದು ಹಾಗೂ ಹೊಸ ಜಲ ಮೂಲಗಳನ್ನು ಸೃಷ್ಟಿಸುವುದು ಬಿ.ಗ್ರೀನ್‍ ಕಾರ್ಯಕ್ರಮದ ಮೊದಲ ಆದ್ಯತೆಯಾಗಿದೆ. ಇದನ್ನು ಕಾರ್ಯರೂಪಕ್ಕೆ ತರಲು ನಾವು ಸಾರ್ವಜನಿಕರು ಹಾಗೂ ಸಂಸ್ಥೆಗಳೊಡನೆ ಸಹಯೋಗ, ಶಿಕ್ಷಣ ಮತ್ತು ಅಡ್ವೊಕಸಿಯ ಮೂಲಕ ಬೆಂಗಳೂರಿನಲ್ಲಿ ನೆಟ್-ಜೀರೋ ನೀರಿನ ಮೂಲಸೌಕರ್ಯಕ್ಕೆ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವತ್ತ ಕಾರ್ಯನಿರ್ವಹಿಸುತ್ತಿದೇವೆ.

 

ಭೂ ಬಳಕೆ ಮತ್ತು ನಗರದಲ್ಲಿನ ಕಿರು ಅರಣ್ಯ ಪ್ರದೇಶಗಳು

ನಗರದ ವೃಕ್ಷ ಸಂಪತ್ತು ನಗರವು ಎದುರಿಸುವ ಹಲವು ಪರ್ಯಾವರ್ಣದ ಸಮಸ್ಯೆಯನ್ನು ಸರಿದೂಗಿಸಲು ಬಹು ಕಡಿಮೆ ವೆಚ್ಚದ ಸಲಹೆಯಾಗಿದೆ. ವೇಗವಾಗಿ ಬೆಳೆಯುತ್ತಿರುವ ನಗರದ ವೃಕ್ಷ ಸಂಪತ್ತು ಸಮಸ್ಯೆಗಳನ್ನು ಸರಿದೂಗಿಸಲು ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕಿರು ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ನಗರವನ್ನು ಮತ್ತೆ ಮರಗಳಿಂದ ಹಸಿರುಗೊಳಿಸುವ ನಿಟ್ಟನಲ್ಲಿ ಒಂದು ದಿಟ್ಟ, ಸಮಗ್ರ ಮತ್ತು ನಗರ ಮಟ್ಟದಲ್ಲಿ ಸಹಯೋಗ ಕಾರ್ಯತಂತ್ರ ರೂಪಿಸಲು ಆಶಿಸುತ್ತೇವೆ.

 

Bpac-programs

ಶಕ್ತಿ ಸಂಪನ್ಮೂಲ ಮತ್ತು ಹವಾಮಾನ

ಈ ಕಾರ್ಯಕ್ರಮವು ಜಗತ್ತಿನ ಬಹುಮುಖ್ಯ ಸಮಸ್ಯೆಯಾದ ಹವಾಮಾನ ಬದಲಾವಣೆ ಮತ್ತು ಬೆಂಗಳೂರು ನಗರದ ಮೇಲೆ ಆಗುವ ದುಷ್ಪರಿಣಾಮಗಳು, ನಾಗರಿಕರಲ್ಲಿ ಇದರ ಬಗೆಗಿನ ಜಾಗೃತಿ ಮೂಡಿಸುವುದು ಒಳಗೊಂಡಂತೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸುತ್ತದೆ.

 

ಘನತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ

ಬೆಂಗಳೂರು ನಾಗರಿಕರು ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆಗಳಲ್ಲಿ ಘನತ್ಯಾಜ್ಯ ನಿರ್ವಹಣೆಯು ಪ್ರಮುಖವಾದುದು. ಈ ಕಾರ್ಯಕ್ರಮವು ನಗಾರದಾದ್ಯಂತ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ರೂಪಿಸುವಲ್ಲಿ ಕೈಗೊಳ್ಳಬೇಕಾದ ವಿಧಾನಗಳು ಹಾಗೂ ಆರ್ಥಿಕವಾಗಿ ಪರಿಣಾಮಕಾರಿಯಾದ ಮರುಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮವು ನಾಗರಿಕರು, ವಿದ್ಯಾರ್ಥಿಗಳು, ಸರ್ಕಾರ ಮತ್ತು ಖಾಸಗಿ ವಲಯಗಳ ಸಹಭಾಗಿತ್ವವನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುತ್ತದೆ.

 

ಸಾರ್ವಜನಿಕರಿಗೆ ಮೀಸಲಿಟ್ಟ ಜಾಗಗಳು

ಬೆಂಗಳೂರಿನ ಎಲ್ಲಾ ನಾಗರಿಕರೂ ಸುಸ್ಥಿರ, ಸುರಕ್ಷಿತ, ಸ್ವಚ್ಛ ಮತ್ತು ಹಸಿರು ಸಾರ್ವಜನಿಕ ಜಾಗಗಳನ್ನು ಹೊಂದುವುದು ಅವರ ಹಕ್ಕು. ಈ ಕಾರ್ಯಕ್ರಮವು ವಿವಿಧ ಸಹಭಾಗಿಗಳ ಮೂಲಕ, ನಗರದಲ್ಲಿ ನಿರ್ವಹಣೆ ಇಲ್ಲದ, ಅಸುರಕ್ಷಿತ ಹಾಗೂ ನಿರ್ಲಕ್ಷಕ್ಕೊಳಗಾದ ಸ್ಥಳಗಳನ್ನು ಗುರುತಿಸಿ ಅವುಗಳನ್ನು ನಾಗರಿಕರ ಬಳಕೆಗೆ ಅನುಕೂಲವಾಗುವ ರೀತಿಯಲ್ಲಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.

 

ಪರಿಣಾಮ

7000

ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ

04

ಕೆರೆಗಳ ಅಭಿವೃದ್ದಿ

200

ಕ್ಕೂ ಹೆಚ್ಚು ನಗರ ಮಟ್ಟದ ಸ್ವಚ್ಛತಾ ಅಭಿಯಾನಗಳು

20

ಸಮಗ್ರ - ಮಟ್ಟದ ಘನತ್ಯಾಜ್ಯ ನಿರ್ವಹಣಾ ಯೋಜನೆಗಳು

20

ಕಾಲೇಜುಗಳು

50

ಶಾಲೆಗಳು – ನಮ್ಮ

ಕಾರ್ಯಕ್ರಮದೊಡನೆ ಸಹಭಾಗಿತ್ವ ಹೊಂದಿರುವ ಶಿಕ್ಷಣ ಸಂಸ್ಥೆಗಳು

ಪ್ರಮುಖ ಸುದ್ದಿ  

ಬಿ.ಗ್ರೀನ್ ಗೆ ಸಂಬಂಧಪಟ್ಟ ಸುದ್ದಿ, ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು.

ಕಾರ್ಯಕ್ರಮದ ಸಹಭಾಗಿ ಸಂಸ್ಥೆಗಳು