Menu-bar-icon

ಬಿ.ಅಕೌಂಟಬಲ್ ಕುರಿತು

ಬಿ.ಅಕೌಂಟೆಬಲ್ ಎಂಬುದು ಬಿ.ಪ್ಯಾಕ್‍ನ ಯೋಜನೆಯಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಸಂಶೋಧನೆ ಮತ್ತು ಅಡ್ವೊಕೆಸಿಯನ್ನು ಪ್ರೋತ್ಸಾಹಿಸುವ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿ ದತ್ತಾಂಶ ಹಾಗೂ ಮಾಹಿತಿ ದೊರೆಯುವಂತೆ ಮಾಡುವುದಾಗಿದೆ. ನೀರು ಸರಬರಾಜು ಮತ್ತು ಒಳಚರಂಡಿ, ಸ್ಥಳೀಯ ನಗರ ಆಡಳಿತ, ಪಟ್ಟಣ ಯೋಜನೆ ಮತ್ತು ನಗರ ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳ ಜವಾಬ್ದಾರಿ ನಿರ್ವಹಿಸುತ್ತಿರುವ ಸಂಸ್ಥೆಗಳ ಈಗಿನ ವ್ಯವಸ್ಥೆ ದೇಶದಲ್ಲಿನ ನಗರದ ಆಡಳಿತ ವ್ಯವಸ್ಥೆಯನ್ನು ಸಂಕೀರ್ಣಗೊಳಿಸಿವೆ. ಉತ್ತಮ ಆಡಳಿತಾತ್ಮಕ ಅಭ್ಯಾಸಗಳು, ಆಡಳಿತ ಸುಧಾರಣೆ ಹಾಗೂ ಹೊಸ ನೀತಿಗಳ ಅನುಷ್ಠಾನವನ್ನು ಪ್ರತಿಪಾದಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಬಿ.ಅಕೌಂಟಬಲ್ ಕಾರ್ಯಕ್ರಮಗಳು:

ಬಿ.ಪ್ಯಾಕ್‍ನ ಬಿ.ಅಕೌಂಟಬಲ್ ಕಾರ್ಯಕ್ರಮವು ಸಂಶೋಧನೆ, ಸರ್ಕಾರಿ ಯೋಜನೆಗಳ ಅಧ್ಯಯನ ಮೂಲಕ ಮತ್ತು ಸರ್ಕಾರಿ ನಿಯಂತ್ರಕರು ಹಾಗೂ ಸರ್ಕಾರಿ ಸಂಸ್ಥೆಗಳೊಂದಿಗೆ ಕೆಲಸ ನಿರ್ವಹಿಸುವುದಾಗಿದೆ.

ಸಂಶೋಧನೆ ಮತ್ತು ಅಡ್ವೊಕಸಿ

ಬಿ.ಪ್ಯಾಕ್‍ನ ಸಂಶೋಧನಾ ಉಪಕ್ರಮವು ಬಿಬಿಎಂಪಿ ಮತ್ತು ಕರ್ನಾಟಕ ಸರ್ಕಾರದ ಆಡಳಿತ, ಹಣಕಾಸು ಮತ್ತು ಬೆಂಗಳೂರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಮಗ್ರವಾದ ಸಂಶೋಧನೆ ನಡೆಸುತ್ತದೆ. ಬಿ.ಪ್ಯಾಕ್‍ನಲ್ಲಿ ನಡೆಸಲಾಗುವ ಸಂಶೋಧನೆಯ ಮೂಲ ಗುರಿಯು, ಮಾಹಿತಿ ಮತ್ತು ದತ್ತಾಂಶವನ್ನು ಸರಳೀಕೃತ ರೂಪದಲ್ಲಿ ನಾಗರಿಕರಿಗೆ ತಿಳಿಸುವುದಾಗಿದೆ. ಪ್ರಾಥಮಿಕ ಹಾಗೂ ದ್ವಿತೀಯ ಮೂಲಗಳಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಸಂಶೋಧಿಸಿ ಅದರ ಮೂಲಕ ನಿಖರ ಪುರಾವೆಗಳನ್ನು ಒದಗಿಸಿ ಆಡಳಿತದ ಎಲ್ಲ ವಿಭಾಗಗಳಲ್ಲಿ ಅಡ್ವೊಕಸಿ ಮತ್ತು ಆಡಳಿತಾತ್ಮಕ ಸಲಹೆಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.

 

ಸರ್ಕಾರಿ ನಿಯಂತ್ರಕ ಚಟುವಟಿಕೆಗಳು

ಕಾನೂನಾತ್ಮಕ ನಿಯಂತ್ರಕರ ಪ್ರಮುಖ ಜವಾಬ್ದಾರಿಗಳಲ್ಲಿ ಬಹುಮುಖ್ಯವಾದದ್ದು ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆ ಮತ್ತು ಅದರ ಪ್ರತಿಪಾದನೆಯಾಗಿದೆ. ಈ ಉಪಕ್ರಮದಡಿಯಲ್ಲಿ, ಬೆಂಗಳೂರಿನ ನಾಗರಿಕರ ಹಿತಾಸಕ್ತಿಯನ್ನು ಕಾಪಾಡಲು, ದತ್ತಾಂಶ ಆಧಾರಿತ ವಿಶ್ಲೇಷಣೆಯನ್ನೊಳಗೊಂಡ ವರದಿಯನ್ನು ಕಾನೂನಾತ್ಮಕ ನಿಯಂತ್ರಕರಿಗೆ ಸಲ್ಲಿಸುತ್ತದೆ. ಬಿ.ಪ್ಯಾಕ್ ಪ್ರಸ್ತುತ, ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ (AERA) ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ (KERC) ನಿಯಂತ್ರಕರೊಂದಿಗೆ ಸಕ್ರಿಯವಾಗಿ ವಿಷಯಗಳನ್ನು ಚರ್ಚಿಸುತ್ತದೆ. ಈ ಪ್ರಯತ್ನದಲ್ಲಿ ಮೇಲೆಕಂಡ ವಲಯಗಳಲ್ಲಿರುವ ನ್ಯೂನ್ಯತೆಗಳಿಂದಾಗಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆಯಾಗುವುದನ್ನು ಅಂಕಿ ಅಂಶಗಳ ಮೂಲಕ ತೋರಿಸುವ ಉದ್ದೇಶವನ್ನು ಹೊಂದಿರುತ್ತದೆ.

 

Bpac-programs
ಪ್ರಮುಖ ಸುದ್ದಿ

ಬಿ.ಅಕೌಂಟಬಲ್ ಗೆ ಸಂಬಂಧಪಟ್ಟ ಸುದ್ದಿ, ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು