Menu-bar-icon
facebook-icon twitter-icon instagram Youtube-icon

ಬಿ.ಮೊಬೈಲ್ ಪರಿಚಯ

ಬೆಂಗಳೂರು ನಗರದಲ್ಲಿ ಸೂಕ್ತ ಸಮೂಹ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಸಾರ್ವಜನಿಕರು ಖಾಸಗಿ ವಾಹನಗಳನ್ನು ಅವಲಂಬಿಸಿರುತ್ತಾರೆ. ಇದರ ಪರಿಣಾಮವಾಗಿ ದೈನಂದಿನ ಪ್ರಯಾಣದ ಅವಧಿಯಲ್ಲಿ ಏರಿಕೆಯಾಗಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಒತ್ತಡ ನಿರ್ಮಾಣವಾಗುವ ವಾತಾವರಣ ಸೃಷ್ಟಿಸಿದೆ.

ಬಿ.ಮೊಬೈಲ್, ಬಿ.ಪ್ಯಾಕ್‍ನ ಸುಸ್ಥಿರ ನಗರ ಸಂಚಾರ ಕಾರ್ಯಕ್ರಮದ ಉಪಕ್ರಮವಾಗಿರುತ್ತದೆ. ಈ ಕಾರ್ಯಕ್ರಮದ ಅಡಿಯಲ್ಲಿ ಸಂಶೋಧನೆ, ನೀತಿ ವಕಾಲತ್ತು ಮತ್ತು ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬಿ.ಮೊಬೈಲ್ ಕಾರ್ಯಕ್ರಮವು ನಗರದ ಸುಸ್ಥಿರ ಸಾರಿಗೆ ವ್ಯವಸ್ಥೆ, ಶೇರ್ಡ್/ ಪೂಲ್ಡ್ ಮೊಬಿಲಿಟಿ, ನಾನ್-ಮೋಟಾರೈಸ್ಡ್ ಟ್ರಾನ್ಸಿಟ್, ಪ್ಯಾರಾ ಟ್ರಾನ್ಸಿಟ್‍ಗೆ ಸಂಬಂಧಿಸಿದಂತೆ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೇವೆ. ಸಾರ್ವಜನಿಕರಿಗೆ ನಗರ ಸಾರಿಗೆಯ ಮೊದಲ ಹಾಗೂ ಕೊನೆಯ ಹಂತದ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವ ದೃಷ್ಟಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುವುದು ಬಿ.ಮೊಬೈಲ್ ನ ಉದ್ದೇಶವಾಗಿದೆ.

ಸಾರ್ವಜನಿಕರ ದೈನಂದಿನ ಪ್ರಯಾಣದಲ್ಲಿ ಖಾಸಗಿ ವಾಹನಗಳ ಬಳಕೆಯನ್ನು ಮಿತಗೊಳಿಸಿ, ಹೆಚ್ಚು ನಗರ ಸಾರಿಗೆ ವ್ಯವಸ್ಥೆಯನ್ನು ಬಳಸುವಂತೆ ಉತ್ತೇಜಿಸುವುದು

ಬಿ.ಮೊಬೈಲ್ ನ ಬಹುಮುಖ್ಯ ಉದ್ದೇಶವಾಗಿರುತ್ತದೆ.ಬಿ.ಮೊಬೈಲ್‍ ಕಾರ್ಯಕ್ರಮವು ಪ್ರಮುಖವಾಗಿ ಉದ್ದೇಶಿಸುವ ಕೆಳಕಂಡ ಕ್ಷೇತ್ರಗಳನ್ನು ಒಳಗೊಳ್ಳುತ್ತದೆ,

01

ಸಾರಿಗೆ ಆಡಳಿತ:

ತಂತ್ರಜ್ಞಾನ ಮತ್ತು ಪರಸ್ಪರ ಕಾರ್ಯಸಾಧ್ಯತೆಯ ಬಳಕೆ ಮೂಲಕ ಸುಲಭ ಸಾರಿಗೆ ಅನುಭವವನ್ನು ನೀಡುವ ಜವಾಬ್ದಾರಿಯೊಂದಿಗೆ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಅಥಾರಿಟಿ (ಯುಎಂಟಿಎ) ಮಸೂದೆಯನ್ನು ಪ್ರತಿಪಾದಿಸುವುದು.

02

ಸಮಗ್ರ ಸಾರಿಗೆ ಯೋಜನೆ:

ಬೆಂಗಳೂರು ನಗರ ಅಭಿವೃದ್ಧಿ ಹೊಂದಿದಂತೆ ನಗರದ ಸಾರಿಗೆ ವ್ಯಯವಸ್ಥೆಯಲ್ಲಿ ಬೇಕಾಗುವ ನವೀಕರಣಗಳು ಹಾಗೂ ಬದಲಾವಣೆ ಬಗೆಗಿನ ಸಲಹೆ ಸೂಚನೆಗಳನ್ನು ನೀಡುವುದು.

03

ಮೂಲಸೌಕರ್ಯ:

ನಗರದ ಬೆಳವಣಿಗೆಗೆ ಅನುಸಾರವಾಗಿ ಸಾರಿಗೆ ವ್ಯವಸ್ಥೆಯನ್ನು ದೂರದೃಷ್ಟಿಯಲ್ಲಿಟ್ಟುಕೊಂಡು ಮುಂಬರುವ ದಿನಗಳಿಗೆ ಬೇಕಾಗುವ ಸಮಗ್ರ ಸಾರಿಗೆ ಯೋಜನೆಗಳಿಗಾಗಿ ಸಲಹೆ ನೀಡುವುದು.

  • ಬಸ್
  • ಸಬ್‍ ಅರ್ಬನ್ ರೈಲ್ವೆ
  • ಮೆಟ್ರೋ
  • ಪರ್ಯಾಯ ಸಾರಿಗೆ ಸೇವಾ ಪೂರೈಕೆದಾರರು: ಸಾರ್ವಜನಿಕ ಸಾರಿಗೆ ನಿಲ್ದಾಣಗಳಿಗೆ ಮೊದಲ ಮತ್ತು ಕೊನೆಯ ಹಂತದ ಸಾರಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ, ಆಟೋಗಳು, ಕ್ಯಾಬ್‌ಗಳು, ಮಿನಿಬಸ್‌ಗಳು ಮತ್ತು ಬೈಕ್‌ಗಳಂತಹ ಪರ್ಯಾಯ ಸಾರಿಗೆ ಸೇವೆಗಳನ್ನು ಮುನ್ನೆಲೆಗೆ ತರುವುದು,
  • ಪಾದಾಚಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸುವುದು ಹಾಗೂ ಜನರನ್ನು ಪಾದಾಚಾರಿಗಳನ್ನಾಗಲು ಪ್ರೇರೇಪಿಸುವುದು.
  • ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ಸ್ ಮತ್ತು ಸಾರಿಗೆ ವ್ಯವಸ್ಥೆಯ ಡಿಜಿಟಲೀಕರಣ
04

ಇ-ಸಂಚಾರ:

ವಿದ್ಯುತ್ ಚಾಲಿತ ಸಾರಿಗೆ ವ್ಯವಸ್ಥೆಯ ಉತ್ತೇಜನ, ಸಾರ್ವಜನಿಕ ಸಾರಿಗೆಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಸೇರ್ಪಡೆ ಹಾಗೂ ಇ-ಸಂಚಾರ ನೀತಿಗಳ ಕಾರ್ಯಾನುಷ್ಠಾನದ ಬಗ್ಗೆ ಪ್ರತಿಪಾದಿಸುತ್ತದೆ.

05

ನಾಗರಿಕರ ಭಾಗವಹಿಸುವಿಕೆ ಮತ್ತು ಜಾಗೃತಿ:

ಕಾರ್ಯಾಗಾರಗಳು ಮತ್ತು ಚರ್ಚೆಗಳ ಮೂಲಕ ಹೆಚ್ಚು ಸುಸ್ಥಿರ ಸಾರಿಗೆ ವಿಧಾನಗಳನ್ನು ಬಳಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.

ಪ್ರಮುಖ ಸುದ್ದಿ  

ಬಿ.ಮೊಬೈಲ್ ಗೆ ಸಂಬಂಧಪಟ್ಟ ಸುದ್ದಿ, ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು