Menu-bar-icon
facebook-icon twitter-icon instagram Youtube-icon

ಬಿ.ಪ್ರೌಡ್ ಪರಿಚಯ

ಬೆಂಗಳೂರಿಗೆ ಸರಿಸುಮಾರು 500 ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿದೆ. ನಗರವು ಹಿಂದೊಮ್ಮೆ ‘ಪಿಂಚಣಿದಾರರ ಸ್ವರ್ಗವೆಂದು ಪ್ರಸಿದ್ದವಾಗಿತ್ತು, ವೇಗವಾದ ನಗರೀಕರಣದ ಪರಿಣಾಮವಾಗಿ ಬೆಂಗಳೂರು ನಗರವು ಈ ಛಾಪನ್ನು ಕಳೆದುಕೊಂಡು ಮಾಲಿನ್ಯ ನಗರವೆಂಬ ಹೆಸರನ್ನು ಪಡೆಯುತ್ತಿದೆ. ಬಿ.ಪ್ರೌಡ್ ಕಾರ್ಯಕ್ರಮದ ಮಹತ್ವಾಕಾಂಕ್ಷೆಯೆಂದರೆ ಬೆಂಗಳೂರು ನಗರದ ವೈಭವಯುತ ಇತಿಹಾಸ ಹಾಗೂ ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವುದಾಗಿದೆ. ನಗರದ ಇತಿಹಾಸ ಹಾಗೂ ಪರಂಪರೆಯು, ನಗರವು ಅಭಿವೃದ್ಧಿ ಹೊಂದುತ್ತಿರುವ ಪರಿಸ್ಥಿತಿಗೆ ಪೂರಕವಾಗುವಂತಹ ಸಂರಕ್ಷಣಾ ಕಾರ್ಯಕ್ರಮಗಳನ್ನು ರೂಪಿಸುವ ದೂರದೃಷ್ಟಿಯನ್ನು ಹೊಂದಿದ್ದೇವೆ.

ಬಿ. ಪ್ರೌಡ್ ಕಾರ್ಯಕ್ರಮವು ಬೆಂಗಳೂರಿನ ನಾಗರಿಕರಿಗೆ ನಗರದ ವೈಭವಯುತ ಇತಿಹಾಸ ಹಾಗೂ ಪರಂಪರೆಯನ್ನು ಪರಿಚಯಿಸುವುದಾಗಿದೆ. ಈ ಪ್ರಯತ್ನದಿಂದ ನಗರದ ಪ್ರತಿಯೊಬ್ಬ ನಿವಾಸಿಯು ಬೆಂಗಳೂರಿನ ಬಗ್ಗೆ ಅವಿಭಾಜ್ಯ ಹಾಗೂ ಹೆಮ್ಮೆಯ ಭಾವನೆಯನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿದೆ.

ಬಿ.ಪ್ರೌಡ್ ನ ಕಾರ್ಯಕ್ಷೇತ್ರಗಳು ಕೆಳಕಂಡಂತಿವೆ,

01

ನಗರದ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು.

02

ಪಾರಂಪರಿಕ ಸ್ಥಳಗಳನ್ನು ಗುರುತಿಸಿ ದಾಖಲು ಮಾಡುವುದು

03

ಪಾರಂಪರಿಕ ಸ್ಥಳಗಳ ಬಗ್ಗೆ ವಿಷಯಗಳನ್ನು ಸಂಗ್ರಹಿಸುವುದು

04

ನಗರದ ಪರಂಪರೆ ಹಾಗೂ ಇತಿಹಾಸ ಸಂರಕ್ಷಣೆಗಾಗಿ ಕಾರ್ಯನೀತಿಯನ್ನು ರೂಪಿಸುವುದು

05

ನಗರದ ಐತಿಹಾಸಿಕ ಸ್ಥಳಗಳ ಬಗ್ಗೆ ಜಾಗೃತಿ ಮೂಡಿಸುವುದು

06

ಸಭೆಗಳು ಮತ್ತು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು

ಪ್ರಾಕೃತಿಕವಾಗಿ ನಿರ್ಮಿಸಲಪಟ್ಟಂತಹ ಬೆಟ್ಟ ಗುಡ್ಡಗಳು, ಕೆರೆಕಟ್ಟೆಗಳು, ತೋಪುಗಳು ಮತ್ತು ನಗರದಲ್ಲಿ ಇರುವಂತಹ ಐತಿಹಾಸಿಕ ಸ್ಮಾರಕಗಳು ಹಾಗೂ ಕಟ್ಟಡಗಳು, ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕಡ್ಲೆಕಾಯಿ ಪರಿಷೆ, ಅಣ್ಣಮ್ಮ ಜಾತ್ರೆ, ಕರಗ ಮಹೋತ್ಸವ ಬೆಂಗಳೂರಿನ ಪರಂಪರೆಯ ವೈಶಿಷ್ಟ್ಯವಾಗಿದೆ.

ಬಿ.ಪ್ಯಾಕ್, ಬೆಂಗಳೂರು ನಗರದ ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವಂತೆ ಕಾರ್ಯಸೂಚಿಗಳನ್ನು ರಚಿಸುವ ಉದ್ದೇಶವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಸಮಾನ ಮನಸ್ಕ ಸಂಸ್ಥೆಗಳು ಹಾಗೂ ತಜ್ಞರೊಂದಿಗೆ ಜೊತೆಗೂಡಿ ಕಾರ್ಯಕ್ರಮಗಳನ್ನು ರೂಪಿಸುವುದಾಗಿದೆ. ಆಸಕ್ತರು ಇದರಲ್ಲಿ ನಮ್ಮೊಂದಿಗೆ ಕೈಜೋಡಿಸಬಹುದಾಗಿದೆ.

ಬಾಲಬ್ರೂಯಿ ಉಳಿಸಿ ಅಭಿಯಾನ

ಸುಮಾರು 150 ವರ್ಷಗಳ ಇತಿಹಾಸವನ್ನು ಹೊಂದಿರುವ ಬಾಲಬ್ರೂಯಿ ಅತಿಥಿ ಗೃಹವನ್ನು ಶಾಸಕರ ಕ್ಲಬ್ ಆಗಿ ಪರಿವರ್ತಿಸಲು ಚಿಂತನೆ ನಡೆದಿತ್ತು. ಗುರುದೇವ್ ರವೀಂದ್ರನಾಥ ಠಾಗೋರ್, ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಆತಿಥ್ಯ ನೀಡಿದ್ದ ಈ ಕಟ್ಟಡ ಮತ್ತು ಅಲ್ಲಿನ ಹಸಿರು ಪರಿಸರ ಹಾಗೂ ಇತಿಹಾಸವನ್ನು ಕಾಪಾಡಿಕೊಳ್ಳಲು ನಾವು ಸಮಾನ ಮನಸ್ಕರೊಂದಿಗೆ ಸೇರಿ ಪ್ರಬಲ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ್ದೇವೆ.

ಕಾರ್ಲ್ಟನ್ ಹೌಸ್ ಉಳಿಸಿ ಅಭಿಯಾನ

ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕಾಗಿ 135 ವರ್ಷಗಳ ಇತಿಹಾಸವುಳ್ಳ ಪಾರಂಪರಿಕ ಕಟ್ಟಡವಾದ ದಿ ಕಾರ್ಲ್ಟನ್ ಹೌಸ್ ಅನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದು ಎಂಬ ವರಧಿಗಳು ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಸರ್ಕಾರದ ಈ ಕ್ರಮವನ್ನು ಬಿ.ಪ್ಯಾಕ್ ತೀವ್ರವಾಗಿ ವಿರೋಧಿಸಿತು. ಕಾರ್ಲ್ಟನ್ ಹೌಸ್ ಹಾಗೂ ಸುತ್ತಲಿನ ಹಸಿರು ತುಂಬಿದ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ವರಧಿಗಳನ್ನು ನಿರಾಕರಿಸುವ ಮೂಲಕ ತಮ್ಮ ಸಾಂಸ್ಕೃತಿಕ ಮತ್ತು ಸಾರ್ವಜನಿಕ ಮನೋಭಾವದ ಕಾಳಜಿಯನ್ನು ಪ್ರದರ್ಶಿಸುವಂತೆ ಕರ್ನಾಟಕ ಸರ್ಕಾರದ ಗೌರವಾನ್ವಿತ ಮುಖ್ಯಮಂತ್ರಿಯವರನ್ನು ಒತ್ತಾಯಿಸಿತು.

ಬೆಂಗಳೂರು ಕೋಟೆಗೆ ಕೆಂಪು ಬಣ್ಣ ಅಭಿಯಾನ

ಬಿ.ಪ್ಯಾಕ್ ಹಾಗೂ ಬೆಂಗಳೂರು ರೆಸಿಡೆನ್ಸಿ ಕಾರ್ಯಕ್ರಮ, ಗೋಥೆ-ಇನ್ಸ್ಟಿಟ್ಯೂಟ್/ಮ್ಯಾಕ್ಸ್ ಮುಲ್ಲರ್ ಭವನ್, MOD - ಇನ್ಸ್ಟಿಟ್ಯೂಟ್ ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿ ಜೊತೆಗೂಡಿ "ಲೆಟ್ಸ್ ಪೇಂಟ್ ದಿ ಕೋಟೆ ರೆಡ್" ಕಾರ್ಯಕ್ರಮವನ್ನು ಆಯೋಜಿಸಿತ್ತು. ಬೆಂಗಳೂರು ರೆಸಿಡೆನ್ಸಿಯ ಭಾಗವಾಗಿರುವ ಜರ್ಮನ್ ಚಲನಚಿತ್ರ ನಿರ್ಮಾಪಕರಾದ ಮಿರಿಯಮ್ ಜಾಕೋಬ್ಸ್ ಮತ್ತು ಗೆರ್ಹಾರ್ಡ್ ಸ್ಕಿಕ್, ಬೆಂಗಳೂರಿನಲ್ಲಿರುವ ಟಿಪ್ಪು ಸುಲ್ತಾನ್ ಕೋಟೆಯ ಬಗ್ಗೆ ಕೇಳಿ ಆಶ್ಚರ್ಯಚಕಿತರಾದರು.

ಬೆಂಗಳೂರು ನಗರದ ಇತಿಹಾಸ ಶೋಧನೆ, ಪರಂಪರೆಯ ಸಂರಕ್ಷಣೆ – ಸಂವಾದ ಕಾರ್ಯಕ್ರಮ

ಬಿ.ಪ್ಯಾಕ್, ಸುಚಿತ್ರ-ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾ, ಅರ್ಬನ್ ರಿಸರ್ಚ್ ಲ್ಯಾಬ್ (URL) ಮತ್ತು ಅಲಯನ್ಸ್ ಫ್ರಾಂಚೈಸ್ ಸಹಯೋಗದಲ್ಲಿ “ಬೆಂಗಳೂರು ನಗರದ ಇತಿಹಾಸ ಶೋಧನೆ, ಪರಂಪರೆಯ ಸಂರಕ್ಷಣೆ” ಎಂಬ ಸಾರ್ವಜನಿಕ ಉಪನ್ಯಾಸವನ್ನು ಆಯೋಜಿಸಿತ್ತು.

ವಾಸ್ತುಶಿಲ್ಪಿ, ನಗರಾಭಿವೃದ್ಧಿ ಯೋಜನೆ ಮತ್ತು ನೀತಿ ತಜ್ಞ ಸಂಜಯ್ ಶ್ರೀಧರ್ "ಎವಲ್ಯುಷನ್ ಆಫ್ ಬೆಂಗಳೂರು ಫ್ರಮ್ ಇಟ್ಸ್ ಹಿಸ್ಟಾರಿಕಲ್
ಪಾಸ್ಟ್ ಇಂಟು ದ ಆರ್ಬನ್ ಫ್ಯೂಚರ್” ವಿಷಯದ ಕುರಿತು ವಿವರವಾದ ಅಧ್ಯಯನವನ್ನು ಪ್ರಸ್ತುತಪಡಿಸಿದರು.