ಬಿ.ಪ್ಯಾಕ್ ನ ನಾಗರಿಕ ನಾಯಕತ್ವ ಕಾರ್ಯಕ್ರಮ (ಬಿ.ಕ್ಲಿಪ್) ಬಿ.ಪ್ಯಾಕ್‍ನ ಪ್ರಮುಖ ಕಾರ್ಯಕ್ರಮವಾಗಿದ್ದು, ನಗರದಲ್ಲಿ ಆಡಳಿತವನ್ನು ಸುಧಾರಿಸಲು, ವಾರ್ಡ್ ಮಟ್ಟದ ನಿರ್ವಹಣೆ ಮತ್ತು ಆಡಳಿತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಜಾಗೃತ ನಾಗರಿಕ ನಾಯಕರ ತಂಡವನ್ನು ರೂಪಿಸಲು ಉದ್ದೇಶಿಸಿದೆ. ಬೆಂಗಳೂರು ನಗರದಲ್ಲಿ ಉತ್ತಮ ಆಡಳಿತ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿ, ಅವರಿಗೆ ತರಗತಿಗಳನ್ನು ಮತ್ತು ವಾರ್ಡ್ ಮಟ್ಟದಲ್ಲಿ ವ್ಯವಸ್ಥೆಯೊಡನೆ ಕಾರ್ಯನಿರ್ವಹಿಸುವ ಕ್ರಿಯಾಯೋಜನೆ ಕೈಗೊಳ್ಳುವ ಮೂಲಕ ಜವಾಬ್ದಾರಿಯುತ ನಾಗರಿಕ ನಾಯಕರನ್ನಾಗಿ ರೂಪಿಸಲಾಗುತ್ತದೆ. ಈ ಕಾರ್ಯಕ್ರಮವು ಸಾರ್ವಜನಿಕ ನೀತಿ ವಿಶ್ಲೇಷಣೆ, ಮಹಾನಗರ ಆಡಳಿತ, ರಾಜಕೀಯ ವ್ಯವಸ್ಥೆ, ಚುನಾವಣಾ ತಂತ್ರಗಾರಿಕೆ ಮತ್ತು ಸಾರ್ವಜನಿಕ ಜೀವನಕ್ಕೆ ಸಂಬಂಧಿತ ವಿಷಯದಲ್ಲಿ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳನ್ನಾಗಿ ರೂಪಿಸುತ್ತದೆ. ಈ ಕಾರ್ಯಕ್ರಮವನ್ನು ಪೂರ್ಣಗೊಳಿಸುವವರು ನಗರ ಪಾಲಿಕೆ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು ಅಥವಾ ಚುನಾಯಿತ ಪ್ರತಿನಿಧಿಗಳೊಂದಿಗೆ ತೊಡಗಿಸಿಕೊಂಡು ಸಕ್ರಿಯ ನಾಗರಿಕ ನಾಯಕರಾಗಿ ವೈಯಕ್ತಿಕ ಸಾಮರ್ಥ್ಯದಲ್ಲಿ ಸಹಾಯ ಮಾಡಬಹುದು.
ಬಿ.ಕ್ಲಿಪ್ ಕಾರ್ಯಕ್ರಮವು ನಗರದಾದ್ಯಂತ ಸಕ್ರಿಯ ನಾಗರಿಕ ನಾಯಕರನ್ನು ರೂಪಿಸಿ ಹಾಗೂ ಈ ನಾಯಕರು ಬಿ.ಪ್ಯಾಕ್ ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಾರ್ಡ್ ಮಟ್ಟದಲ್ಲಿ ಜನರು ಎದುರಿಸುತ್ತಿರುವ ಕುಂದುಕೊರತೆಗಳಿಗೆ ಪರಿಹಾರಗಳನ್ನು ಅನುಷ್ಠಾನಗೊಳಿಸುವ ದೂರದೃಷ್ಟಿಯನ್ನು ಹೊಂದಿರುತ್ತಾರೆ. ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯುತ ವ್ಯವಸ್ಥೆಯನ್ನು ತರಲು ಸಾರ್ವಜನಿಕ ಜೀವನ್ನು ಪ್ರವೇಶಿಸಬೇಕ್ಕೆನ್ನುವ ಆಸಕ್ತಿ ಇರುವವರಿಗೆ ಬಿ.ಕ್ಲಿಪ್ ಒಂದು ಉತ್ತಮ ವೇದಿಕೆಯಾಗಿದೆ. ಇವರಲ್ಲಿ ಚುನಾವಣೆಗೆ ಸೂಕ್ತ ಅಭ್ಯರ್ಥಿ ಎನ್ನಿಸಿದರೆ ಅವರಿಗೆ ಎಂಡೋರ್ಸ್ ಮಾಡುವ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೋತ್ಸಾಹಿಸಲಾಗುವುದು.
ಬಿ.ಕ್ಲಿಪ್ ಕಾರ್ಯಕ್ರಮವು ತರಗತಿ, ಪ್ರಯೋಗ, ಹಾಗೂ ವಾರ್ಡ್ ಮಟ್ಟದಲ್ಲಿ ವ್ಯವಸ್ಥೆಯೊಡನೆ ಕಾರ್ಯನಿರ್ವಹಿಸುವ ಕ್ರಿಯಾಯೋಜನೆ ಎಂಬ ಮೂರು ಹಂತಗಳನ್ನು ಹೊಂದಿರುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ರಾಜಕೀಯ ವ್ಯವಸ್ಥೆ, ಸಾರ್ವಜನಿಕ ನೀತಿ ಮತ್ತು ಸಾರ್ವಜನಿಕ ಆಡಳಿತದ ಬಗ್ಗೆ ತಿಳಿಸಿಕೊಡಲಾಗುತ್ತದೆ. ಪಠ್ಯಕ್ರಮದ ವಿನ್ಯಾಸ ಮತ್ತು ತರಗತಿಯ ಅವಧಿಯನ್ನು ತಕ್ಷಶಿಲಾ ಸಂಸ್ಥೆಯು, ಬಿ.ಪ್ಯಾಕ್ ನೊಂದಿಗೆ ಸಮಾಲೋಚಿಸಿ ಸಮನ್ವಯದಲ್ಲಿ ರಚಿಸಲಾಗಿದೆ.
ಈ ಕಾರ್ಯಕ್ರಮವನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ,
3 ಹಂತಗಳ ತರಬೇತಿ – ತರಗತಿ, ಪ್ರಯೋಗ ಮತ್ತು ಕ್ರಿಯಾಯೋಜನೆ
ಮೊದಲನೇ ಹಂತ – ತರಬೇತಿ (3 ತಿಂಗಳುಗಳು)
ತರಗತಿಗಳು
ನಗರಾಡಳಿತದ ಕುರಿತು ಜ್ಞಾನ ಮತ್ತು ವಿವರಗಳನ್ನು ನೀಡುವ ಮೂಲ ಸಿದ್ಧಾಂತಗಳು. ನಗರೀಕರಣವನ್ನು ಅರ್ಥಮಾಡಿಕೊಳ್ಳುವುದು; ನೀತಿ ನಿರ್ವಹಣೆ; 101 ಆರ್ಥಿಕ ಕಾರಣ; ಸರಕಾರದಲ್ಲಿ ನಿರ್ಧಾರಗಳನ್ನು ಮಾಡುವ ಪ್ರಕ್ರಿಯೆ, ಸಾರ್ವಜನಿಕ ನಾಯಕತ್ವದಲ್ಲಿ ನೀತಿಶಾಸ್ತ್ರ ಇತ್ಯಾದಿ.
ಪ್ರಾಯೋಗಿಕ ಹಂತ
ನಗರಾಡಳಿತ, ಚುನಾವಣೆ ಮತ್ತು ರಾಜಕೀಯ ಸ್ಥಿತಿಗತಿಗಳ ಅರಿವು, ಬೆಂಗಳೂರಿಗೊಂದು ಕಾರ್ಯಸೂಚಿ, ಮುನಿಸಿಪಲ್ ರಚನೆ, ಬಿಬಿಎಂಪಿ ಹಾಗೂ ಇತರೆ ಸರ್ಕಾರಿ ಅಂಗಸಂಸ್ಥೆಗಳ ಇಲಾಖಾವಾರು ವ್ಯವಹಾರಗಳ ರೀತಿನೀತಿ, ಸಾರ್ವಜನಿಕ ಸಮಸ್ಯೆಗಳನ್ನು ಕುರಿತು ಅಧ್ಯಯನ ಮತ್ತು ವಿಶ್ಲೇಷಣೆ; ನಗರದ ರಾಜಕೀಯ, ಚುನಾವಣಾ ಪ್ರಚಾರಗಳ ನಿರ್ವಹಣೆ ಇತ್ಯಾದಿ
ಕ್ರಿಯಾಯೋಜನೆ ಹಂತ
ಪ್ರತಿಯೊಬ್ಬ ಅಭ್ಯರ್ಥಿಗೂ ತಮ್ಮ ವಾರ್ಡ್ ನಲ್ಲಿ ಸಾರ್ವಜನಿಕ ಸಮಸ್ಯೆಗಳ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಳ್ಳಲು ವ್ಯಕ್ತಿಗತ ಮತ್ತು ಸಂಘ ಸಂಸ್ಥೆಗಳನ್ನೊಳನ್ನು ಜೊತೆಗೂಡಿಸಿಕೊಂಡು ಚಟುವಟಿಕೆಗಳನ್ನು ರಚಿಸುವುದಾಗಿರುತ್ತದೆ.
ಉದಾಹರಣೆಗೆ: ಮಹಿಳೆಯರ ಸುರಕ್ಷತೆ; ವಾಹನ ನಿಲುಗಡೆ; ರಸ್ತೆ ದುರಸ್ತಿ; ಕಸ/ತ್ಯಾಜ್ಯ ನಿರ್ವಹಣೆ, ಇತ್ಯಾದಿ.
ಎಲ್ಲ ತರಬೇತಿಗಳನ್ನು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ನಡೆಸಲಾಗುತ್ತದೆ.
ಎರಡನೇ ಹಂತ
ಮೂರು ತಿಂಗಳ ತರಗತಿಯ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಕಾರ್ಯಕ್ರಮದ ಅಭ್ಯರ್ಥಿಗಳು ಒಂದು ವಾರ್ಡ್ ಮಟ್ಟದಲ್ಲಿ ಕ್ರಿಯಾಯೋಜನೆಯನ್ನು ರೂಪಿಸುತ್ತಾರೆ. ಈ ಪ್ರಕ್ರಿಯೆಯು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ತರಗತಿಯಲ್ಲಿ ತಿಳಿದುಕೊಂಡ ವಿಚಾರಗಳನ್ನು ಅನ್ವಯಿಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವಾಗಿರುತ್ತದೆ.
ಬಿ. ಕ್ಲಿಪ್ ಕಾರ್ಯಕ್ರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕೆಳಕಂಡ 4 ವಿಷಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯೋಜನೆಗಳನ್ನು ರಚಿಸಬೇಕಾಗುತ್ತದೆ