ಬಿ.ಪ್ಯಾಕ್ ಬಗ್ಗೆ
ಬೆಂಗಳೂರು ರಾಜಕೀಯ ಕಾರ್ಯಕಾರಿ ಸಮಿತಿಯು ಪಕ್ಷಾತೀತ ನಾಗರಿಕರ ವೇದಿಕೆಯಾಗಿದ್ದು, ಬೆಂಗಳೂರಿನ ಆಡಳಿತ ಮತ್ತು ಜನರ ಜೀವನ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಬಿ.ಪ್ಯಾಕ್ ನ ಮುಖ‍್ಯ ಉದ್ದೇಶಗಳೇನೆಂದರೆ, ಬೆಂಗಳೂರಿನಲ್ಲಿ ಉತ್ತಮ ಆಡಳಿತ ಪದ್ಧತಿ, ಸರ್ಕಾರದ ಎಲ್ಲಾ ಹಂತಗಳಲ್ಲಿ ಸಮಗ್ರತೆ ಮತ್ತು ಪಾರದರ್ಶಕತೆ ತರುವಂತೆ ಮಾಡುವುದು. ನಗರದಲ್ಲಿ ಮೂಲಸೌಕರ್ಯಗಳ ಗುಣಮಟ್ಟ ಸುಧಾರಣೆ, ಪ್ರತಿಯೊಬ್ಬ ಪ್ರಜೆಗೆ ಕಾನೂನಾತ್ಮಕ ರಕ್ಷಣೆ ಒದಗಿಸುವಂತಹ ಸುರಕ್ಷಿತ ನಗರವನ್ನಾಗಿ ಬೆಂಗಳೂರನ್ನು ರೂಪಿಸುವುದು. ಪ್ರಜಾಸಕ್ತತೆಯ ಎಲ್ಲಾ ಹಂತಗಳಲ್ಲಿ ಸೂಕ್ತ ಅಭ್ಯರ್ಥಿಳನ್ನು ಗುರುತಿಸಿ ಬೆಂಬಲಿಸುವುದಾಗಿದೆ.
ಬಿ.ಪ್ಯಾಕ್ ಸಂಸ್ಥೆಯು ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿಸುವ ಗುರಿಯನ್ನು ಹೊಂದಿದೆ. ಬೆಂಗಳೂರಿನಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕೆಂಬ ಮಹತ್ವಕಾಂಕ್ಷೆಯನ್ನು ಹೊಂದಿರುವ ನಾಗರಿಕ ಮುಖಂಡರಿಗೆ ತರಬೇತಿ ನೀಡುವುದು, ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಪ್ರತಿಪಾದಿಸುವುದು, ಪರಿಣಾಮಕಾರಿ ನಿಯಮಗಳನ್ನು ಸರ್ಕಾರಕ್ಕೆ ಸೂಚಿಸುವುದು, ನಗರದಲ್ಲಿ ಸುಸ್ಥಿರ ಸಂಚಾರ ಪರಿಸರ ಸಂರಕ್ಷಣೆ, ಬೆಂಗಳೂರಿನ ಇತಿಹಾಸ ಹಾಗೂ ಪರಂಪರೆ ಸಂರಕ್ಷಣೆ.
ಬಿ.ಕ್ಲಿಪ್
ಪೌರಾಡಳಿತ ನಾಯಕತ್ವ ತರಬೇತಿ ಕಾರ್ಯಕ್ರಮ
ಬಿ.ಕ್ಲಿಪ್ ಕಾರ್ಯಕ್ರಮವು ಬಿ.ಪ್ಯಾಕ್ ನ ಬಹುಮುಖ್ಯ ಕಾರ್ಯಕ್ರಮವಾಗಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾಗವಹಿಸಿ, ನಗರದಲ್ಲಿ ಕ್ರಿಯಾತ್ಮಕ ಬದಲಾವಣೆ ತರುವಂತಹವರನ್ನು ಗುರುತಿಸಿ ಅವರಿಗೆ ಅಗತ್ಯ ತರಬೇತಿ ನೀಡಿ ಬೆಂಬಲವಾಗಿ ನಿಲ್ಲಲಾಗುತ್ತದೆ.
ಬಿ.ಎಂಗೇಜ್ಡ್
ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಿಕೆ ಕಾರ್ಯಕ್ರಮ
ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಬಿ.ಎಂಗೆಜ್ಡ್ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ನಗರದಲ್ಲಿ ಜನಸ್ನೇಹಿ ಆಡಳಿತವನ್ನು ಉತ್ತೇಜಿಸಲು ನಾಗರಿಕರು, ಚುನಾಯಿತ ಪ್ರತಿನಿಧಿಗಳು ಮತ್ತು ನಾಗರಿಕ ಸಂಸ್ಥೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
ಬಿ.ಸೇಫ್
ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಕಾರ್ಯಕ್ರಮ
ಬಿ.ಸೇಫ್ ಕಾರ್ಯಕ್ರಮವು, ಸಾರ್ವಜನಿಕ ಪ್ರದೇಶಗಳು, ಸಾರ್ವಜನಿಕ ಸಾರಿಗೆ ಮತ್ತು ಔದ್ಯೋಗಿಕ ಸ್ಥಳಗಳಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಯನ್ನು ಕಾಪಾಡಲು ಬದ್ದವಾಗಿದೆ.
ಬಿ.ಗ್ರೀನ್
ಪರಿಸರ ಸಂರಕ್ಷಣೆ ಕಾರ್ಯಕ್ರಮ
ಜಗತ್ತಿನಲ್ಲಿ ಹೆಚ್ಚುತ್ತಿರುವ ಪ್ರಾಕೃತಿಕ ಅಸಮತೋಲನಗಳಿಂದ ಉದ್ಬವಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಮತ್ತು ಅವುಗಳಿಗೆ ಸುಸ್ಥಿರ ಪರಿಹಾರ ನೀಡುವಂತೆ ಬಿ.ಗ್ರೀನ್ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಬಿ.ಅಕೌಂಟಬಲ್
ಕಾನೂನಾತ್ಮಕ ವಿಷಯಗಳು, ಸಂಶೋಧನೆ ಮತ್ತು ಪ್ರತಿಪಾದನಾ ಕಾರ್ಯಕ್ರಮ
ನಗರದ ಆಡಳಿತಾತ್ಮಕ ವಿಚಾರಗಳಲ್ಲಿ ಸಂಶೋಧನೆ & ನಾಗರಿಕರ ಹಕ್ಕುಗಳನ್ನು ಪ್ರತಿಪಾದಿಸುವಂತೆ ಬಿ.ಅಕೌಂಟಬಲ್ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಇದರ ಮೂಲಕ ನಾಗರಿಕರಿಗೆ ಅಂಕಿ ಅಂಶಗಳು & ಮಾಹಿತಿ ತಲುಪಿಸುವಂತೆ ಮಾಡಲಾಗುತ್ತದೆ.
ಬಿ.ಮೊಬೈಲ್
ಸುಸ್ಥಿರ ಸಾರಿಗೆ ಕಾರ್ಯಕ್ರಮ
ಬಿ.ಮೊಬೈಲ್ ಕಾರ್ಯಕ್ರಮವು ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯ ಬಗ್ಗೆ ಸಂಶೋಧನೆ ನಡೆಸುತ್ತದೆ. ನಗರದಲ್ಲಿ ಸುಸ್ಥಿರ ನಗರ ಸಾರಿಗೆಯ ಬೆಳವಣಿಗೆ, ಸಾರ್ವಜನಿಕ ಸಾರಿಗೆ ಬಳಕೆ ಜಾಗೃತಿ, ಇದರಿಂದಾಗುವ ಪ್ರಯೋಜನಗಳ ಬಗ್ಗೆ ಸಂಶೋಧನೆ ನಡೆಸಿ ಮೂಲಸೌಕರ್ಯಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಜಾರಿಗೊಳಿಸುವಂತೆ ಮನವಿ ಮಾಡುವುದು ಬಿ.ಮೊಬೈಲ್ ಕಾರ್ಯಕ್ರಮದ ಉದ್ದೇಶ.
ಬಿ.ಪ್ರೌಡ್
ಪರಂಪರೆ ಸಂರಕ್ಷಣೆ ಕಾರ್ಯಕ್ರಮ
ಬಿ.ಪ್ರೌಡ್ ಕಾರ್ಯಕ್ರಮವು ನಗರದ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತದೆ.