ಇದು ಪ್ರಜಾಪ್ರಭುತ್ವದಲ್ಲಿ ನಾಗರಿಕರ ಸಹಭಾಗಿತ್ವವನ್ನು ಉತ್ತೇಜಿಸಲು ನೆಡೆಸುತ್ತಿರುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ನಗರವನ್ನು ಪ್ರತಿನಿಧಿಸುತ್ತಿರುವ ಚುನಾಯಿತ ಪ್ರತಿನಿಧಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ನಾಗರಿಕ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸುವುದು. ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಪಕ್ಷಾತೀತ ವೇದಿಕೆಗಳನ್ನು ಒದಗಿಸುವ ಮೂಲಕ ನಗರದ ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಪರಿಸರ ವಿಷಯಗಳನ್ನೊಳಗೊಂಡಂತೆ ಕೆಲಸ ಮಾಡುವುದು ಕಾರ್ಯಕ್ರಮದ ಗುರಿಯಾಗಿದೆ.
ನಗರದ ಪ್ರತಿನಿಧಿಗಳ ಕಾರ್ಯವೈಕರಿಯಲ್ಲಿ ಪಾರದರ್ಶಕತೆ, ದಕ್ಷತೆ, ಉತ್ತಮ ಆಡಳಿತ ಅಭ್ಯಾಸಗಳನ್ನು ಅಳವಡಿಸುವ ಮೂಲಕ ನಗರದ ನಾಗರಿಕ ಜೀವನ ಮಟ್ಟವನ್ನು ಹೆಚ್ಚಿಸುವುದಾಗಿರುತ್ತದೆ. ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ನಾಗರಿಕರ ಭಾಗವಹಿಸುವಿಕೆಯ ಗುರಿಯನ್ನು ಸಾಕಾರಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಬಿ. ಎಂಗೇಜ್ಡ್ ಕಾರ್ಯಕ್ರಮದ ಅಡಿಯಲ್ಲಿ ನಡೆಸಿರುವ ವಿವಿಧ ಚಟುವಟಿಕೆಗಳು ಈ ಕೆಳಕಂಡಂತಿವೆ,
ಚುನಾಯಿತ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆ
ಈ ಕಾರ್ಯಕ್ರಮವು ಚುನಾಯಿತ ಪ್ರತಿನಿಧಿಗಳು ಹಾಗೂ ನಾಗರಿಕರೊಂದಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ ತಳಮಟ್ಟದಲ್ಲಿ ಸಮಸ್ಯೆಗಳನ್ನು ಗುರುತಿಸುವ ಮತ್ತು ಪರಿಹಾರಗಳನ್ನು ಸೂಚಿಸುವ ಉದ್ದೇಶವನ್ನು ಹೊಂದಿದೆ. ನಾಗರಿಕರು ಮತ್ತು ಚುನಾಯಿತ ಪ್ರತಿನಿಧಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಇಬ್ಬರ ನಡುವೆ ವಿಶ್ವಾಸವನ್ನು ಹೆಚ್ಚಿಸುವ ಗುರಿಯನ್ನೂ ಹೊಂದಿದೆ.
ಸಿಟಿಜನ್ ಡ್ಯಾಶ್‌ಬೋರ್ಡ್
ವಾರ್ಡ್ / ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಚುನಾಯಿತ ಕಾರ್ಪೊರೇಟರ್ಸ್, ಶಾಸಕರು, ಸಂಸದರು ಮತ್ತು ಬೆಂಗಳೂರು ನಗರ ಮಟ್ಟದಲ್ಲಿ ಸಾರ್ವಜನಿಕ ಸೇವೆಗಳನ್ನು ಒದಗಿಸುತ್ತಿರುವ ಸಂಸ್ಥೆಗಳ ಬಗ್ಗೆ ಮಾಹಿತಿಯು ಲಭ್ಯವಾಗುವಂತೆ ಮಾಡುವುದರ ಮೂಲಕ ಆಡಳಿತಾತ್ಮಕ ಚಟುವಟಿಕೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸಾರ್ವಾಜನಿಕ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಫೆಲೋಶಿಪ್
ಈ ಫೆಲೋಷಿಪ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಚಟುವಟಿಕೆಗಳಲ್ಲಿ ಭಾಗವಹಿಸಲು ಚುನಾಯಿತ ಪ್ರತಿನಿಧಿಗಳೊಂದಿಗೆ ತೊಡಗಿಸಿಕೊಳ್ಳುತ್ತಾರೆ ಈ ಮೂಲಕ ಸಂಶೋದನೆ, ನೀತಿ ನಿರೂಪಣೆ, ಸಾರ್ವಜನಿಕ ಮತ್ತು ಆಡಳಿತಾತ್ಮಕ ವಿಷಯಗಳ ಬಗ್ಗೆ ಪ್ರಸ್ತುತ ಸ್ಥಿತಿಗತಿಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ನಾವು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಪಬ್ಲಿಕ್ ಪಾಲಿಸಿ ವಿಭಾಗದೊಂದಿಗೆ ಇದನ್ನು ಕಾರ್ಯರೂಪಕ್ಕೆ ತಂದಿರುತ್ತೇವೆ.
ಎಲೆಕ್ಷನ್ ಹಬ್ಬ
ಎಲೆಕ್ಷನ್ ಹಬ್ಬ ಕಾರ್ಯಕ್ರಮವು ಬಿ. ಪ್ಯಾಕ್ ನ ಮತದಾನ ಮತ್ತು ಚುನಾವಣಾ ಜಾಗೃತಿ ಮೂಲಕ ಮತದಾನ ಹೆಚ್ಚಿಸುವ ಅಭಿಯಾನವಾಗಿದೆ. ಚುನಾಯಿತ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮತದಾನ ಹಾಗೂ ಅನ್ಯ ಚುನಾವಣಾ ಪ್ರಕ್ರಿಯೆಗಳನ್ನೊಳಗೊಂಡ ಅಂಶಗಳನ್ನು ಜೊತೆಗೂಡಿಸಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
ಸಹಭಾಗಿತ್ವ
ಬೆಂಗಳೂರಿನ ಹಲವು ಕಾರ್ಪೋರೇಟ್ ಸಂಸ್ಥೆಗಳು ನಗರಕ್ಕೆ ಹಲವಾರು ರೀತಿಯಲ್ಲಿ ತಮ್ಮ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ (CSR) ಮೂಲಕ ಕೊಡುಗೆ ನೀಡಬೇಕೆಂದು ಆಶಿಸುತ್ತದೆ. ಈ ಸಂಸ್ಥೆಗಳ ಜೊತೆ ಕೈ ಜೋಡಿಸಿ ನಗರ ಅಭಿವೃದ್ಧಿ ಯೋಜನೆಗಳು ತಂತ್ರಜ್ಞಾನಗಳನ್ನೊಳಗೊಂಡ ಕಾರ್ಯಕ್ರಮ ಮತ್ತು ಸ್ವಯಂಸೇವಕರನ್ನು ಒಳಗೊಂಡು ಕಾರ್ಯಕ್ರಮವನ್ನು ರೂಪಿಸುವುದಾಗಿದೆ. ನಮ್ಮ ಸಹಭಾಗಿತ್ವ ಕಾರ್ಯಕ್ರಮ, ಕಾರ್ಪೋರೇಟ್ ಸಂಸ್ಥಗಳು ಮತ್ತು ಚುನಾಯಿತ ಪ್ರತಿನಿಧಿಗಳನ್ನು ಕೂಡಿಸಿ ನಾಗರಿಕರಿಗೆ ಅನುಕೂಲವಾಗುವ ಕಾರ್ಯಗಳನ್ನು ಕೈಗೊಳ್ಳುವುದಾಗಿರುತ್ತದೆ.
ಬಿ. ಎಂಗೇಜ್ಡ್ ಕಾರ್ಯಕ್ರಮದಡಿಯಲ್ಲಿ ಕೆಲಸ ಮಾಡಿರುವ ಸಹಭಾಗಿ ಸಂಸ್ಥೆಗಳು.