Menu-bar-icon
facebook-icon twitter-icon instagram Youtube-icon

ಬಿ.ಸೇಫ್

ನಗರದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಹಾಗೂ ಸುರಕ್ಷತಾ ಕ್ರಮಗಳನ್ನು ಸೂಚಿಸುವ ಉದ್ದೇಶದಿಂದ ಬಿ.ಪ್ಯಾಕ್ ನ ಪ್ರಮುಖ ಕಾರ್ಯಕ್ರಮವಾಗಿ ಬಿ.ಸೇಫ್ ಕಾರ್ಯನಿರ್ವಹಿಸುತ್ತಿದೆ.

ಬಿ. ಸೇಫ್ ಕಾರ್ಯಕ್ರಮಗಳು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರು, ಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಮಹಿಳೆಯರು ಮತ್ತು ಮಕ್ಕಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ, ಶಾಲೆಗಳಲ್ಲಿ ಹಾಗೂ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸುರಕ್ಷಿತ ವಾತಾವರಣವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ.

ಬಿ.ಪ್ಯಾಕ್ ಸಂಸ್ಥೆಯು ಮಹಿಳಾ ಸುರಕ್ಷತೆ ಹಾಗೂ ಮಕ್ಕಳ ಸುರಕ್ಷತೆಯ ಮೇಲೆ ಕೆಲಸ ಮಾಡಲು ತಜ್ಞರನ್ನೊಳಗೊಂಡ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದೆ. ಈ ತಜ್ಞರ ತಂಡವು ಮಹಿಳೆಯರು ಮತ್ತು ಮಕ್ಕಳ ಮೇಲೆ ನೆಡೆಯುವ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಪರಿಚಯಿಸುವುದು, ತುರ್ತು ಪರಿಸ್ಥಿತಿಯಲ್ಲಿ ನಿರ್ವಹಿಸಬೇಕಾಗುವಂತಹ ಕಾರ್ಯಸೂಚಿಯನ್ನು ತಯಾರಿಸುವುದು, ಪ್ರಕರಣಗಳಿಗೆ ಸಂಬಂಧಿಸದಂತೆ ನ್ಯಾಯಾಂಗ ವ್ಯವಸ್ಥೆಯ ಪರಿಚಯ ಮತ್ತು ಅರಿವು ಮೂಡಿಸುವುದಾಗಿದೆ. ಸಾರ್ವಜನಿಕರಿಗೆ ಜಾಗೃತಿ ಅಭಿಯಾನಗಳನ್ನು ರಚಿಸುವುದನ್ನೊಳಗೊಂಡಂತೆ ಲಿಂಗ ಸಂವೇದನ ತರಬೇತಿ, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿರುತ್ತದೆ; ಸರ್ಕಾರದ ಪ್ರಮುಖ ಇಲಾಖೆಗಳ ಸಹಯೋಗದೊಂದಿಗೆ ಕೆಲಸ ಮಾಡುವುದು, ಬೆಂಗಳೂರು ನಗರ ಪೊಲೀಸ್ ಇಲಾಖೆ ಮತ್ತು ವಿಷಯ ತಜ್ಞರು, ಸಮಾನ ಮನಸ್ಕ ಸಂಸ್ಥೆಗಳ ಜೊತೆಗೂಡಿ ಮಹಿಳಾ ಮತ್ತು ಮಕ್ಕಳ ಸುರಕ್ಷತಾ ಕಾರ್ಯಕ್ರಮಗಳನ್ನು ನೆಡೆಸುವುದಾಗಿದೆ.

ಕಾರ್ಯಕ್ರಮಗಳು  

ಬಿ. ಸೇಫ್ ನ ಪ್ರಮುಖ ಕಾರ್ಯ ಕ್ಷೇತ್ರಗಳು ಕೆಳಕಂಡಂತಿವೆ,

ಶಾಲೆಗಳು

ಮಕ್ಕಳ ಬೆಳವಣಿಗೆಗೆ ಪೂರಕವಾಗುವಂತೆ ಶಾಲೆಗಳಲ್ಲಿ ಯಾವುದೇ ರೀತಿಯ ಹಿಂಸಾಚಾರ, ಕಿರುಕುಳ ಅಥವಾ ನಿಂದನೆಗಳು ನೆಡೆಯದಂತಹ ವಾತಾವರಣವನ್ನು ಸೃಷ್ಟಿಸುವ ಸುರಕ್ಷಿತ ಶಾಲೆ ಉಪಕ್ರಮದ ಉದ್ದೇಶವಾಗಿದೆ.

 

ಕೆಲಸದ ಸ್ಥಳ

ಮಹಿಳೆಯರು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಹೊಂದುವುದು ಅವರ ಮೂಲಭೂತ ಹಕ್ಕಾಗಿರುತ್ತದೆ. ಬೆಂಗಳೂರು ನಗರವು, ದೇಶದಲ್ಲೇ ಅತಿ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ನಗರವಾಗಿದೆ. ಬಹುದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯನಿರ್ವಹಿಸುವ ಸ್ಥಳಗಳು ಅನೌಪಚಾರಿಕ ವಲಯಗಳ ಅಡಿಯಲ್ಲಿ ಗುರುತಿಸಲ್ಪಟ್ಟಿರುತ್ತದೆ. ಇತ್ತೀಚಿನ ಅಧ್ಯಯನಗಳಿಂದ ಹೊರಬಂದಿರುವ ಪಾಲಿತಾಂಶವೇನೆಂದರೆ ಬಹಳಷ್ಟು ಸಂಸ್ಥೆಗಳು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆಯನ್ನು ಜಾರಿಗೆ ತಂದಿಲ್ಲವೆಂದು ತಿಳಿದುಬರುತ್ತದೆ.

 

ಸಾರ್ವಜನಿಕ ಸ್ಥಳಗಳು

ಬೆಂಗಳೂರು ನಗರವು 800 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದ್ದು, ಪ್ರತಿದಿನ 5 ದಶಲಕ್ಷ ಮಹಿಳೆಯರು ಸಾರ್ವಜನಿಕ ಸ್ಥಳಗಳನ್ನು ಬಳಸುತ್ತಾರೆ. ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಲು ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳನ್ನು ವಿನ್ಯಾಸಗೊಳಿಸುವ ಸಮಯದಲ್ಲಿ ಮಹಿಳೆಯರ ಸುರಕ್ಷತೆಯ ದೃಷ್ಟಿಯನ್ನಿಟ್ಟುಕೊಂಡು ಯೋಜನೆ ರೂಪಿಸುವುದು, ನಾಗರಿಕರಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದು ಬಹುಮುಖ್ಯ ಕಾರ್ಯವಾಗಿರುತ್ತದೆ.

 

Bpac-programs

ಜನ ಜಾಗೃತಿ

ಮಹಿಳೆಯರ ಸುರಕ್ಷತೆ ವಿಚಾರವು ಹಲವು ಅಂಶಗಳನ್ನು ಒಳಗೊಂಡಿರುತ್ತದೆ. ಮುಖ್ಯವಾಗಿ ಸುರಕ್ಷತಾ ದೃಷ್ಟಿಯಿಂದ ಇರುವ ಕಾನೂನುಗಳು, ನೀತಿ ಮತ್ತು ಸಾರ್ವಜನಿಕ ಮಾಹಿತಿಯನ್ನೊಳಗೊಂಡಿದೆ. ಬಿ.ಪ್ಯಾಕ್ ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಇಲಾಖೆ, ಹಾಗೂ ಇತರೆ ಸರ್ಕಾರಿ ಸಂಸ್ಥೆಗಳು ಮತ್ತು ಸಹಯೋಗಿ ಸಂಸ್ಥೆಗಳ ಜೊತೆಗೆ ಮಹಿಳಾ ಮತ್ತು ಮಕ್ಕಳ ಸುರಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಬದಲಾವಣೆ ಬೇಕಾಗುವ ಕಾನೂನು ಹಾಗೂ ನೀತಿಗಳನ್ನು ರಚಿಸಲು ಕೆಲಸ ಮಾಡುತ್ತದೆ.

 

ನಮ್ಮ ಪ್ರತಿಪಾದನೆ

ಮಹಿಳೆಯರಿಗೆ ಸುರಕ್ಷಿತ ಸ್ಥಳಗಳನ್ನು ರೂಪಿಸುವಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ಸರ್ಕಾರದ ವಿವಿಧ ಇಲಾಖೆಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಬೆಂಗಳೂರು ನಗರ ಪೊಲೀಸ್, ಬಿಎಂಟಿಸಿ, ಬಿಬಿಎಂಪಿ, ಶಿಕ್ಷಣ ಇಲಾಖೆ ಮತ್ತಿತರ ಇಲಾಖೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಿ ಜಾರಿಗೊಳಿಸುವಂತೆ ಬಿ.ಪ್ಯಾಕ್ ಪ್ರತಿಪಾದಿಸುತ್ತದೆ.

 

ಇದುವರೆಗಿನ ಕಾರ್ಯಕ್ರಮದ ಪರಿಣಾಮ

ಸುರಕ್ಷಿತ ಶಾಲೆ

  • 6ಕ್ಷೇತ್ರಗಳ 150 ಶಾಲೆಗಳ ಶಿಕ್ಷಕರಿಗೆ ಸಾಮರ್ಥ್ಯಾಭಿವೃದ್ದಿ ನಡೆಸಲಾಗಿದೆ
  • 3700ಕ್ಕೂ ಹೆಚ್ಚು ಮಕ್ಕಳಿಗೆ ಸುರಕ್ಷತಾ ಕಾರ್ಯಾಗಾರ
  • 4ಕ್ಷೇತ್ರಗಳ ಬಿಬಿಎಂಪಿ ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಇರಬಹುದಾದಂತ ಲೋಪದೋಷಗಳ ವಿಶ್ಲೇಷಣೆ

ಸುರಕ್ಷಿತ ಕೆಲಸದ ಸ್ಥಳ

  • ಐಸಿಸಿಯ 50ಕ್ಕೂ ಹೆಚ್ಚು ಹೊರಗಿನ ಸದಸ್ಯರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ
  • ಬೆಂಗಳೂರು ನಗರದಲ್ಲಿ ಸ್ಥಳೀಯ ದೂರು ಸಮಿತಿ ರಚಿಸುವಂತೆ ಸಲಹೆ ನೀಡಿದೆ.

ಸುರಕ್ಷಿತ ಸಾರ್ವಜನಿಕ ಸ್ಥಳ

  • 11000 ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ 110 ಲಿಂಗ ಸಂವೇದನಾ ಕಾರ್ಯಾಗಾರಗಳು ನಡೆಸಲಾಗಿದೆ
  • 12 ಬಿಎಂಟಿಸಿ ಘಟಕಗಳಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಟ್ಟಡಿಗಳನ್ನು ಸ್ಥಾಪಿಸಲು ಸಲಹೆಯನ್ನು ನೀಡಲಾಗಿದೆ
  • ಬೆಂಗಳೂರಿನ ಎಲ್ಲಾ 198 ವಾರ್ಡ್‌ಗಳ ಸಾರ್ವಜನಿಕ ಸ್ಥಳಗಳ ಸೇಫ್ಟಿ ಆಡಿಟ್ ನಡೆಸಲಾಗಿದೆ
ಪ್ರಮುಖ ವಿಷಯಗಳು  

ಬಿ.ಸೇಫ್ ಗೆ ಸಂಬಂಧಪಟ್ಟ ಸುದ್ದಿ, ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು

ಸಲಹಾ ಸಮಿತಿ  

ಸಲಹಾ ಸಮಿತಿಯ ಸದಸ್ಯರುಗಳ ಪರಿಚಯ,