ಬೆಂಗಳೂರು ರಾಜಕೀಯ ಕಾರ್ಯಕಾರಿ ಸಮಿತಿಯು ಪಕ್ಷಾತೀತ ನಾಗರಿಕರ ವೇದಿಕೆಯಾಗಿದ್ದು, ಬೆಂಗಳೂರಿನ ಆಡಳಿತ ಮತ್ತು ಜನರ ಜೀವನ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಬಿ.ಪ್ಯಾಕ್ ನ ಮುಖ‍್ಯ ಉದ್ದೇಶಗಳೇನೆಂದರೆ, ಬೆಂಗಳೂರಿನಲ್ಲಿ ಉತ್ತಮ ಆಡಳಿತ ಪದ್ಧತಿ, ಸರ್ಕಾರದ ಎಲ್ಲಾ ಹಂತಗಳಲ್ಲಿ ಸಮಗ್ರತೆ ಮತ್ತು ಪಾರದರ್ಶಕತೆ ತರುವಂತೆ ಮಾಡುವುದು. ನಗರದಲ್ಲಿ ಮೂಲಸೌಕರ್ಯಗಳ ಗುಣಮಟ್ಟ ಸುಧಾರಣೆ, ಪ್ರತಿಯೊಬ್ಬ ಪ್ರಜೆಗೆ ಕಾನೂನಾತ್ಮಕ ರಕ್ಷಣೆ ಒದಗಿಸುವಂತಹ ಸುರಕ್ಷಿತ ನಗರವನ್ನಾಗಿ ಬೆಂಗಳೂರನ್ನು ರೂಪಿಸುವುದು. ಪ್ರಜಾಸಕ್ತತೆಯ ಎಲ್ಲಾ ಹಂತಗಳಲ್ಲಿ ಸೂಕ್ತ ಅಭ್ಯರ್ಥಿಳನ್ನು ಗುರುತಿಸಿ ಬೆಂಬಲಿಸುವುದಾಗಿದೆ.
ಬೆಂಗಳೂರು ರಾಜಕೀಯ ಕಾರ್ಯಕಾರಿ ಸಮಿತಿ (ಬಿ.ಪ್ಯಾಕ್)ಯು ಭಾಗವಹಿಸುವಿಕೆ ಪ್ರಜಾಪ್ರಭುತ್ವದ ವೇದಿಕೆಯಾಗಿ ಹೊರಹೊಮ್ಮಿದೆ. ಚುನಾವಣಾ ವೆಚ್ಚದಲ್ಲಿ ಪಾರದರ್ಶಕತೆ, ಚುನಾವಣಾ ಪ್ರಚಾರ, ಜವಾಬ್ದಾರಿಯುತ ಚುನಾವಣಾ ಪ್ರಚಾರ, ಚುನಾವಣಾ ಪೂರ್ವಸಭೆಗಳು ನಡೆಸುವ ಮೂಲಕ ಮತದಾನ ಹೆಚ್ಚಳಕ್ಕೆ ಪ್ರೇರೇಪಿಸುತ್ತದೆ.
ನಗರದ ಜೀವನದ ಗುಣಮಟ್ಟವನ್ನು ಸುಧಾರಿಸಲು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯನ್ನು ಸ್ಥಾಪಿಸಲಾಗಿದೆ. ಇದರ ಉದ್ದೇಶಗಳು ಈ ಕೆಳಗಿನಂತಿವೆ:
ಈ ಉದ್ದೇಶಗಳನ್ನು ಸಾಧಿಸಲು ನಮ್ಮ ಕಾರ್ಯತಂತ್ರವು ಸಂಘಟಿತ ಮಧ್ಯಸ್ಥಿಕೆಗಳ ಮೂಲಕ ನಡೆಯುತ್ತದೆ. ನಮ್ಮ ಪ್ರಜಾಪ್ರಭುತ್ವವು ಕಾನೂನು ಮತ್ತು ಸಾರ್ವಜನಿಕ ಆಡಳಿತದಿಂದ ನಡೆಸಲ್ಪಡುವ ಸಂವಿಧಾನದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತದೆ, ನಮ್ಮ ಮಧ್ಯಸ್ಥಿಕೆಗಳು ಇವುಗಳ ಮೇಲೆ ಕೇಂದ್ರೀಕರಿಸಲಾಗಿರುತ್ತದೆ.
ಬೆಂಗಳೂರನ್ನು ವಿಶ್ವದರ್ಜೆಯ ಮಹಾನಗರವನ್ನಾಗಿ ಮಾಡುವ ಗುರಿಯಿಂದ ಆಸಕ್ತಿ ಇರುವ ಸಾರ್ವಜನಿಕ ನಾಯಕರುಗಳಿಗೆ ತರಬೇತಿ, ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಉತ್ತೇಜನ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಪರಿಸರ ರಕ್ಷಣೆ, ಸಾರ್ವಜನಿಕ ಸಂಚಾರ ಪರಿಹಾರಗಳು, ಇತಿಹಾಸ ಹಾಗೂ ಪರಂಪರೆಯನ್ನು ಪರಿಚಯಿಸುವುದು, ಪರಿಣಾಮಕಾರಿ ನಿಯಮಗಳ ವಕಾಲತ್ತುಗಳನ್ನು ಉತ್ತೇಜಿಸುವ ಕಾರ್ಯಗಳ ಮೇಲೆ ಕಾರ್ಯನಿರ್ವಹಿಸಲಾಗುತ್ತದೆ. ಬಿ.ಪ್ಯಾಕ್ ಸಂಸ್ಥೆಯ ಧ್ಯೇಯವನ್ನು ತಲುಪಲು ನಡೆಸುವ ಕಾರ್ಯಕ್ರಮಗಳು/ಉಪಕ್ರಮಗಳ ಪಟ್ಟಿ ಕೆಳಕಂಡಂತಿದೆ.
ಈ ಕಾರ್ಯಸೂಚಿಯ ಪಟ್ಟಿಯಲ್ಲಿ ಬಿ.ಪ್ಯಾಕ್ ಸಮಿತಿಯು ಸರಕಾರ ಹಾಗೂ ಸಮಾಜವನ್ನು ಉದ್ದೇಶಿಸಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇವನ್ನು ಜಾರಿಗೊಳಿಸುವುದರಿಂದ ನಗರದಲ್ಲಿ ಜನಜೀವನ ಉತ್ತಮಗೊಳ್ಳುವುದು ಎಂಬ ವಿಶ್ವಾಸವನ್ನು ಹೊಂದಿದೆ. ಉದ್ದೇಶಿತ ಗುರಿಗಳನ್ನು ಮುಟ್ಟುತ್ತಲೇ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಕಾಲಕಾಲಕ್ಕೂ ಅವುಗಳ ಪುನರಾವಲೋಕನವನ್ನು ಮಾಡುತ್ತ ಸದಾ ಬದಲಾಗುತ್ತಲೇ ಇರುವ ನಗರದ ಅಗತ್ಯಗಳನ್ನು ಪೂರೈಸಲು ಸಮಿತಿಯು ಕಾರ್ಯಸೂಚಿಯನ್ನು ತಿದ್ದಬಯಸುತ್ತದೆ.
ಸರಕಾರದ ನೀತಿ, ಯೋಜನೆ ಮತ್ತು ಆಡಳಿತ ಎಲ್ಲವೂ ಪರಸ್ಪರ ಅವಲಂಬಿತವಾಗಿ ಒಂದರಲ್ಲಿನ್ನೊಂದು ಬೆರೆತುಹೋಗಿರುತ್ತವೆ. ಇದರಿಂದ ನಗರಾಡಳಿತದಲ್ಲಿ ವಿವಿಧ ರೀತಿಯಲ್ಲಿ ತೊಡಗಿರುವ ಬೆಂಗಳೂರು ಮಹಾನಗರ ಪಾಲಿಕೆ, ರಾಜ್ಯ ಸರಕಾರ ಹಾಗೂ ಕೇಂದ್ರದ ಅಂಗಸಂಸ್ಥೆಗಳ ಪಾತ್ರಗಳಲ್ಲಿ ಕೆಲವೊಮ್ಮೆ ಗೊಂದಲಗಳು ಉಂಟಾಗುತ್ತವೆ. ಸುಧಾರಣೆ ಹಾಗೂ ನೀತಿ ನಿಯಮಗಳಲ್ಲಿ ಬದಲಾವಣೆಯನ್ನು ತಂದು ನಗರಜನಜೀವನವನ್ನು ಹೆಚ್ಚು ಪರಿಣಾಮಕಾರಿಯಾಗಿ ಉತ್ತಮಗೊಳಿಸಬೇಕೆಂದು ಸಂಸದಿನ 74ನೇ ತಿದ್ದುಪಡಿಯಲ್ಲದೆ ಕರ್ನಾಟಕ ನಗರ ಪಾಲಿಕೆಗಳ ಕಾಯಿದೆ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಕಾಯಿದೆಗಳಲ್ಲಿ ಮಂಡಿತವಾಗಿದೆ. ಆದರೆ ಸುಧಾರಣ ಕ್ರಮಗಳನ್ನು ತಕ್ಕರೀತಿಯಲ್ಲಿ ಈಗಿರುವ ವ್ಯವಸ್ಥೆಯಿಂದ ನೆರವೇರಿಸಲಾಗಿಲ್ಲ.
ಈ ಕಾರಣಕ್ಕಾಗಿ ಬಿ.ಪ್ಯಾಕ್ ಲಕ್ಷ್ಯವು ಕೆಳಕಂಡ ಕೆಲವು ಉಪಾಯಗಳತ್ತ ಗಮನಹರಿಸಿದೆ:
ನಿಬಂಧನಾತ್ಮಕ ಯೋಜನಾತಂತ್ರವನ್ನು ರೂಪಿಸಿ, ಪ್ರಾದೇಶಿಕ ಯೋಜನಾ ಪ್ರಾಧಿಕಾರವನ್ನು ಸ್ಥಾಪಿಸಿ ಅದರ ಮೂಲಕ ಬೆಂಗಳೂರು ನಗರದ ಎಲ್ಲಾ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಂಜೂರು ಮಾಡುವುದು.
ಬೆಂಗಳೂರು ಮಹಾನಗರದ ಮಹಾಪೌರರಿಗೆ, ಪಾಲಿಕೆಯ ಆಯುಕ್ತರಿಗೆ ಮತ್ತು ಇತರ ಪ್ರಮುಖ ಅಧಿಕಾರಿಗಳಿಗೆ ಅರ್ಥಪೂರ್ಣವಾದ ಅವಧಿಯನ್ನು ನೀಡಿ, ಅವರಿಗೆ ನಗರವನ್ನು ಒಂದು ನಿರ್ದಿಷ್ಟ ಯೋಜನೆಗೆ ತಕ್ಕಂತೆ ರೂಪಿಸಲು ಸರಿಯಾದ ಕಾಲಾವಕಾಶವನ್ನು ಕಲ್ಪಿಸುವುದು. ಸಂವಿಧಾನದ 74ನೇ ತಿದ್ದುಪಡಿ ಮತ್ತು ಡಾ|| ಕೆ.ಕಸ್ತೂರಿರಂಗನ್ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವುದು.
ನಗರಾಡಳಿತದ ವ್ಯವಸ್ಥೆಯನ್ನು ಬಲಪಡಿಸಲು, ನಾಗರಿಕ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ಮತ್ತು ನಗರವನ್ನು ನಿರ್ವಹಿಸುವ ವ್ಯವಸ್ಥೆಗೆ ಅಧಿಕಾರವನ್ನು ವೃದ್ಧಿಸಲು ಬೆಂಗಳೂರು ಮಹಾನಗರ ಪ್ರಾದೇಶಿಕ ಆಡಳಿತ ವಿಧೇಯಕವನ್ನು ಕಾಯಿದೆಯ ರೂಪಕ್ಕೆ ತರುವುದು.
ಕಲ್ಪಿಸುವುದು ಸರಕಾರದಿಂದ ರಚಿತವಾದ ನಗರಸೇವಾ ಪೂರೈಕೆಯ ಅಂಗಸಂಸ್ಥೆಗಳನ್ನು ಒಂದೇ ಪ್ರಾಧಿಕಾರದಡಿಯಲ್ಲಿ ತರುವುದು (ಉ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಸಾರಿಗೆ, ವಿದ್ಯುತ್ ಸರಬರಾಜು, ಇತ್ಯಾದಿ). ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನ ಎಲ್ಲಾ ಭಾಗಗಳನ್ನು ನಿರ್ವಹಿಸಲು ಅಗತ್ಯವಾದ ಸಿಬ್ಬಂದಿ ಸೌಕರ್ಯಗಳನ್ನು ಒದಗಿಸುವು. ಸಿಬ್ಬಂದಿಯ ಕೊರತೆಯನ್ನು ನಗರ ಪಾಲಿಕೆಯಲ್ಲಿ ಮೇಲ್ಕಂಡ ಸರಕಾರದಿಂದ ರಚಿತವಾದ ಅಂಗ ಸಂಸ್ಥೆಗಳಲ್ಲಿ ತಡಮಾಡದೆ ಪರಿಹರಿಸಿ ನಗರಾಭಿವೃದ್ಧಿಗೆ ಅಗತ್ಯವಾದ ಅಧಿಕಾರಿಗಳ ನೇಮಕ ಮಾಡುವುದು. ರಾಜ್ಯಮಟ್ಟದಲ್ಲಿ ನಗರಾಡಳಿತಕ್ಕಾಗಿಯೇ ಪದವೃಂದವನ್ನು ಸ್ಥಾಪಿಸುವುದು ಹಾಗೂ ಅದರಿಂದಲೇ ನಗರಾಡಳಿತಕ್ಕಾಗಿ ಅಧಿಕಾರಿಗಳನ್ನು ನೇಮಿಸುವುದು.
ನಗರಸೇವಾ ಸಂಸ್ಥೆಗಳಲ್ಲಿ ಮಂಡಳಿಗಳಲ್ಲಿ ತಜ್ಞರನ್ನು ನೇಮಿಸಿ, ಖಾಸಗಿ ವಲಯದಿಂದ ಪರಿಣತಿ ಪಡೆದಿರುವ ವ್ಯಕ್ತಿಗಳನ್ನು ಒಳಗೊಂಡ ಸಲಹಾ ಸಮಿತಿಗಳನ್ನು ರಚಿಸುವುದು.
ನಗರವು ದಿನೇದಿನೇ ಬೆಳೆಯುತ್ತಲೇ ಇದೆ ಮತ್ತು ಅದು ಎದುರಿಸುತ್ತಿರುವ ಸಮಸ್ಯೆಗಳೂ ಹೆಚ್ಚುತ್ತಿವೆ. ಅಲ್ಲದೆ, ನಾಗರಿಕರ ಮತ್ತು ಸರಕಾರದ ನಡುವೆ ಅಂತರ ಹೆಚ್ಚುತ್ತಿದೆ. ಈ ಸವಾಲುಗಳನ್ನು ಎದುರಿಸಲು ಬಿ.ಪ್ಯಾಕ್ ಬಡಾವಣೆಯ ಮಟ್ಟದಿಂದಲೇ ನಾಗರಿಕರು ಅಧಿಕೃತವಾಗಿ ಆಡಳಿತ ನಿರ್ಧಾರಗಳಲ್ಲಿ ಪಾಲ್ಗೊಳ್ಳಲು ಹಾಗೂ ಸಮಸ್ಯೆಗಳಿಗೆ ಪರಿಹಾರಗಳನ್ನು ರೂಪಿಸಲು ಆಗ್ರಹಿಸುತ್ತದೆ. ಇದನ್ನು ಸಾಧಿಸಲು:
ಬೆಂಗಳೂರು ನಗರಕ್ಕೆ ಗಂಭೀರವಾದ ಹಣಕಾಸಿನ ಕೊರತೆ ಎದುರಾಗಿದ್ದು ಮೂಲಭೂತ ಸೌಕರ್ಯ, ಆರ್ಥಿಕ ಚಟುವಟಿಕೆಗಳು ಮತ್ತು ಸಾರ್ವಜನಿಕ ಸೇವೆಗಳ ಆರೋಗ್ಯಕ್ಕೆ ಸವಾಲಾಗಿದೆ. ರಾಜ್ಯದ ಅರ್ಥವ್ಯವಸ್ಥೆಗೆ ಬೆಂಗಳೂರು ಎಷ್ಟು ಮುಖ್ಯ ಎಂದುಕೊಂಡು ರಾಜ್ಯದ ಈ ‘ಇಂಜಿನ್’ ಸರಾಗವಾಗಿ ಸಾಗುವಂತೆ ನೋಡಿಕೊಳ್ಳಬೇಕಾಗಿದೆ. ನಗರದ ಆದಾಯವನ್ನು ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಬೇಕಾಗಿದೆ. ಉದಾಹರಣೆಗೆ -
ಈ ರೀತಿ ನೀಡಬಹುದಾದ ಹಣವನ್ನು ನಗರದ ಮೂಲಭೂತ ಸೌಕರ್ಯವನ್ನು ಉತ್ತಮಗೊಳಿಸಲು ಮಹಾನಗರ ಪಾಲಿಕೆಗೆ ಅಥವಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬಹುದು. ಈ ಮಾದರಿಯ ಸಂಗ್ರಹಣೆ ಮತ್ತು ವಿತರಣೆಯನ್ನು ರಾಜ್ಯದ ಎಲ್ಲಾ ನಗರಗಳಲ್ಲೂ ಅವುಗಳ ಅಭಿವೃದ್ಧಿಗೆ ಅಳವಡಿಸಬಹುದು.
ಬಹುಮಟ್ಟಿಗೆ ನಾಗರಿಕರಲ್ಲಿ ಈ ಸಂಸ್ಥೆಗಳ ಕಾರ್ಯಾಚರಣೆಯ ಬಗ್ಗೆ ಅಥವಾ ಅವು ನಡೆಸುತ್ತಿರುವ ಸರಿತಪ್ಪುಗಳ ಬಗ್ಗೆ ಸ್ಪಷ್ಟವಾದ ತಿಳಿವಳಿಕೆ ಇರುವುದಿಲ್ಲ. ಈ ಸಂಸ್ಥೆಗಳ ಪರಿಣಾಮಿ ಕಾರ್ಯಾಚರಣೆಯನ್ನು ಅಳೆಯಲು ನಿರ್ದಿಷ್ಟವಾದ ಅಳತೆಗೋಲುಗಳನ್ನು ಸಾಕ್ಷಿಪಡಿಸಿ ಸಾರ್ವಜನಿಕ ಪರಿಶೀಲನೆಗೆ ತರಬೇಕು, ಸಣ್ಣಪುಟ್ಟ ಕಾಮಗಾರಿಯಾಗಿರಲಿ ಅಥವಾ ಒಟ್ಟು ನಗರದ ಅಭಿವೃದ್ಧಿಯ ಮಟ್ಟದಲ್ಲಾಗಲಿ.
ವಿಶ್ವದ ಪ್ರಖ್ಯಾತ ಮಹಾನಗರಗಳಲ್ಲಿ ಒಂದಾಗಲು ನಮಗೆ ವಿಶ್ವ-ಮನ್ನಣೆಯ ಗುಣಮಟ್ಟದ ಮೂಲಭೂತ ಸೌಕರ್ಯದ ಅಗತ್ಯವಿದೆ. ಈಗಿರುವ ಸ್ಥಿತಿಯಲ್ಲಿ ಗಂಭೀರವಾದ ಕೊರತೆ ನಮ್ಮ ಭೌತಿಕ ಸೌಲಭ್ಯದಲ್ಲಿ, ಜ್ಞಾನ ಸಂಪಾದನ ವಲಯದಲ್ಲಿ, ಸಾಮಾಜಿಕ ಮಟ್ಟದಲ್ಲಿ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಎದ್ದುಕಾಣುತ್ತಿದೆ. ನಮ್ಮ ಮೂಲಭೂತ ಸೌಕರ್ಯವನ್ನುಎಲ್ಲಾ ವಲಯಗಳಲ್ಲೂ ಅಭಿವೃದ್ಧಿಗೊಳಿಸಲು ಸಮಗ್ರವಾದ ಯೋಜನೆಯನ್ನು ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಮಿತಿಯು ಸರಕಾರಕ್ಕೆ ಜನವರಿ 8, 2013 ರಂದು ನೀಡಿದೆ. ಈ ಯೋಜನೆಯಡಿಯಲ್ಲಿ ಶಿಫಾರಸ್ಸು ಮಾಡಿರುವ ಪ್ರತಿಕ್ರಮವನ್ನು ಸರಕಾರವು ಕೈಗೊಳ್ಳಬೇಕು ಮತ್ತು ಬರುವ 10 ವರ್ಷಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಬಿ.ಪ್ಯಾಕ್ ಆಗ್ರಹಿಸುತ್ತದೆ.
1.ನಗರಗಳ ಪ್ರಾತಿನಿಧ್ಯವನ್ನು ಹೆಚ್ಚಿಸುವುದು – ಭಾರತವು ವೇಗವಾಗಿ ನಗರೀಕೃತವಾಗುತ್ತಿದ್ದರೂ, ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಅದೇ ಪ್ರಮಾಣದಲ್ಲಿ ಪ್ರಾತಿನಿಧ್ಯ ಹೆಚ್ಚುತ್ತಿಲ್ಲ. ಈ ತಾರತಮ್ಯವನ್ನು ಸರಿಪಡಿಸಲು ಕಾನೂನು ಹಾಗೂ ರಾಜಕೀಯ ಪ್ರಕ್ರಿಯೆಗಳನ್ನು ಬಳಸುವ ಪ್ರಯತ್ನಗಳಾಗಬೇಕು.
2.ಚುನಾವಣೆಗಳಲ್ಲಿ ಸ್ಪರ್ಧಿಸಲು ಹಣ: ಅಧಿಕೃತವಾಗಿ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಖರ್ಚು ಮಾಡಬಹುದಾದ ಮಿತಿಯು ವಾಸ್ತವಕ್ಕೆ ಬದ್ಧವಾಗಿಲ್ಲ. ಇದನ್ನು ಸರಿಪಡಿಸಬೇಕು. ಅಲ್ಲದೆ, ಚುನಾವಣೆಗಳಲ್ಲಿ ಖರ್ಚಾಗುತ್ತಿರುವ ಹಣಕಾಸಿನ ಮೇಲೆ ನಿಯಂತ್ರಣವೂ ದುರ್ಬಲವಾಗಿದೆ. ಚುನಾವಣೆ ಆಯೋಗ ಮತ್ತು ನ್ಯಾಯಾಲಯಗಳಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಿ ವಾಸ್ತವಕ್ಕೆ ತಕ್ಕಂತೆ ಖರ್ಚಿನ ಮಿತಿ ಮತ್ತು ನಿಯಂತ್ರಣದ ನಿಯಮಗಳನ್ನು ರೂಪಿಸಬೇಕಾಗಿದೆ. ಚುನಾವಣೆಯ ಹಿಂದಿನ ದಿನ ಈ ಕುರಿತ ಮಾಹಿತಿಯು ಸಾರ್ವಜನಿಕರ ಮುಂದಿರಬೇಕು
ಬಿ.ಪ್ಯಾಕ್ ಪ್ರತಿಪಾದಿತ ಉದ್ದೇಶಗಳು ಫಲಿಸಲು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ನಾಗರಿಕರು ಅವುಗಳನ್ನು ಅನುಮೋದಿಸಿ ಬೆಂಬಲಿಸಬೇಕಾಗಿದೆ. ಅದಕ್ಕಾಗಿ, ಬಿ.ಪ್ಯಾಕ್ ಸಾರ್ವಜನಿಕರಿಗೆ ಅಗತ್ಯವಾದ ಮಾಹಿತಿಯನ್ನು ಆಗಿಂದಾಗ್ಗೆ ಒದಗಿಸಲು ಸಂವಹನ ಸಾಧನಗಳನ್ನು ಬಳಸಿ ನಾಗರಿಕರಿಗೆ ತನ್ನ ಕಾರ್ಯಕ್ರಮಗಳ ಬಗ್ಗೆ ಅವುಗಳ ಪ್ರಗತಿಯ ಬಗ್ಗೆ ವಿವರಿಸುವ ಸಂಪರ್ಕಯೋಜನೆಯನ್ನು ರೂಪಿಸಿದೆ.
(a) ಬಿ.ಪ್ಯಾಕ್ ಬೆಂಬಲಿಗರ ‘ಬಿ.ಪ್ಯಾಕ್ ಸ್ನೇಹ ವೃಂದ’ ಕಟ್ಟಿಕೊಂಡು ತನ್ನ ಉದ್ದಿಶ್ಯವನ್ನು ನಗರದ ಮೂಲೆಮೂಲೆಗೂ ತಲುಪಿಸುವುದು ಮತ್ತು ಆ ನಿಟ್ಟಿನಲ್ಲಿ ಹಲವಾರು ನಾಗರಿಕ ವೇದಿಕೆಗಳನ್ನು ಬಳಸುವುದು.
(b) ಬಿ.ಪ್ಯಾಕ್ ವೆಬ್‍ಸೈಟ್‍ನಲ್ಲಿ ಇಂತಹ ಆಶಯಗಳನ್ನು ಹೊತ್ತವರನ್ನು ನೋಂದಾಯಿಸಿ, ಬಿ.ಪ್ಯಾಕ್ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಕ್ರಮವಾಗಿ ನೀಡುತ್ತ, ಅಂಥವರ ಸಹಕಾರವನ್ನು ಪಡೆದು ಬೆಂಗಳೂರಿಗೊಂದು ಕಾರ್ಯಸೂಚಿಯನ್ನು ಪರಿಷ್ಕರಿಸುವ ದಿಕ್ಕಿನಲ್ಲಿ ಸಾಗುವುದು.
(c) ಅದರಂತೆಯೇ ತೊಡಗಿಸಿಕೊಂಡಿರುವ ಸಂಘಟನೆಗಳೊಂದಿಗೆ ಬಿ.ಪ್ಯಾಕ್ ಕೈಜೋಡಿಸಿ ತಕ್ಕ ಕಾರ್ಯಕ್ರಮಗಳಲ್ಲಿ ಪಾಲುದಾರಿಕೆಯನ್ನು ನೀಡುವುದು.
(d) ಬಿ.ಪ್ಯಾಕ್ ಒಂದು ಸಾರ್ವಜನಿಕ ಸಂವಹನ ಯೋಜನೆಯ ಅಡಿಯಲ್ಲಿ ಮಾಧ್ಯಮಕ್ಕಾಗಿ ವಿಶೇಷವಾಗಿ ತಯಾರಿಸಿದ ಮಾಹಿತಿಯನ್ನು ಒದಗಿಸುವುದು. ಬಿ.ಪ್ಯಾಕ್ ಸದಸ್ಯರು ವೈಯಕ್ತಿಕವಾಗಿಯೂ ಮಾಧ್ಯಮಗಳಲ್ಲಿ ಬೆಂಗಳೂರಿಗೊಂದು ಕಾರ್ಯಸೂಚಿಯ ಪ್ರವರ್ತಕರಾಗಿ ತೊಡಗಿಸಿಕೊಳ್ಳುವರು.