ಬೆಂಗಳೂರು ನಗರದಲ್ಲಿ ಸೂಕ್ತ ಸಮೂಹ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಸಾರ್ವಜನಿಕರು ಖಾಸಗಿ ವಾಹನಗಳನ್ನು ಅವಲಂಬಿಸಿರುತ್ತಾರೆ. ಇದರ ಪರಿಣಾಮವಾಗಿ ದೈನಂದಿನ ಪ್ರಯಾಣದ ಅವಧಿಯಲ್ಲಿ ಏರಿಕೆಯಾಗಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಒತ್ತಡ ನಿರ್ಮಾಣವಾಗುವ ವಾತಾವರಣ ಸೃಷ್ಟಿಸಿದೆ.
ಬಿ.ಮೊಬೈಲ್, ಬಿ.ಪ್ಯಾಕ್‍ನ ಸುಸ್ಥಿರ ನಗರ ಸಂಚಾರ ಕಾರ್ಯಕ್ರಮದ ಉಪಕ್ರಮವಾಗಿರುತ್ತದೆ. ಈ ಕಾರ್ಯಕ್ರಮದ ಅಡಿಯಲ್ಲಿ ಸಂಶೋಧನೆ, ನೀತಿ ವಕಾಲತ್ತು ಮತ್ತು ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬಿ.ಮೊಬೈಲ್ ಕಾರ್ಯಕ್ರಮವು ನಗರದ ಸುಸ್ಥಿರ ಸಾರಿಗೆ ವ್ಯವಸ್ಥೆ, ಶೇರ್ಡ್/ ಪೂಲ್ಡ್ ಮೊಬಿಲಿಟಿ, ನಾನ್-ಮೋಟಾರೈಸ್ಡ್ ಟ್ರಾನ್ಸಿಟ್, ಪ್ಯಾರಾ ಟ್ರಾನ್ಸಿಟ್‍ಗೆ ಸಂಬಂಧಿಸಿದಂತೆ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೇವೆ. ಸಾರ್ವಜನಿಕರಿಗೆ ನಗರ ಸಾರಿಗೆಯ ಮೊದಲ ಹಾಗೂ ಕೊನೆಯ ಹಂತದ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವ ದೃಷ್ಟಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುವುದು ಬಿ.ಮೊಬೈಲ್ ನ ಉದ್ದೇಶವಾಗಿದೆ.
ಸಾರ್ವಜನಿಕರ ದೈನಂದಿನ ಪ್ರಯಾಣದಲ್ಲಿ ಖಾಸಗಿ ವಾಹನಗಳ ಬಳಕೆಯನ್ನು ಮಿತಗೊಳಿಸಿ, ಹೆಚ್ಚು ನಗರ ಸಾರಿಗೆ ವ್ಯವಸ್ಥೆಯನ್ನು ಬಳಸುವಂತೆ ಉತ್ತೇಜಿಸುವುದು
ತಂತ್ರಜ್ಞಾನ ಮತ್ತು ಪರಸ್ಪರ ಕಾರ್ಯಸಾಧ್ಯತೆಯ ಬಳಕೆ ಮೂಲಕ ಸುಲಭ ಸಾರಿಗೆ ಅನುಭವವನ್ನು ನೀಡುವ ಜವಾಬ್ದಾರಿಯೊಂದಿಗೆ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಅಥಾರಿಟಿ (ಯುಎಂಟಿಎ) ಮಸೂದೆಯನ್ನು ಪ್ರತಿಪಾದಿಸುವುದು.
ಬೆಂಗಳೂರು ನಗರ ಅಭಿವೃದ್ಧಿ ಹೊಂದಿದಂತೆ ನಗರದ ಸಾರಿಗೆ ವ್ಯಯವಸ್ಥೆಯಲ್ಲಿ ಬೇಕಾಗುವ ನವೀಕರಣಗಳು ಹಾಗೂ ಬದಲಾವಣೆ ಬಗೆಗಿನ ಸಲಹೆ ಸೂಚನೆಗಳನ್ನು ನೀಡುವುದು.
ನಗರದ ಬೆಳವಣಿಗೆಗೆ ಅನುಸಾರವಾಗಿ ಸಾರಿಗೆ ವ್ಯವಸ್ಥೆಯನ್ನು ದೂರದೃಷ್ಟಿಯಲ್ಲಿಟ್ಟುಕೊಂಡು ಮುಂಬರುವ ದಿನಗಳಿಗೆ ಬೇಕಾಗುವ ಸಮಗ್ರ ಸಾರಿಗೆ ಯೋಜನೆಗಳಿಗಾಗಿ ಸಲಹೆ ನೀಡುವುದು.
ವಿದ್ಯುತ್ ಚಾಲಿತ ಸಾರಿಗೆ ವ್ಯವಸ್ಥೆಯ ಉತ್ತೇಜನ, ಸಾರ್ವಜನಿಕ ಸಾರಿಗೆಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಸೇರ್ಪಡೆ ಹಾಗೂ ಇ-ಸಂಚಾರ ನೀತಿಗಳ ಕಾರ್ಯಾನುಷ್ಠಾನದ ಬಗ್ಗೆ ಪ್ರತಿಪಾದಿಸುತ್ತದೆ.
ಕಾರ್ಯಾಗಾರಗಳು ಮತ್ತು ಚರ್ಚೆಗಳ ಮೂಲಕ ಹೆಚ್ಚು ಸುಸ್ಥಿರ ಸಾರಿಗೆ ವಿಧಾನಗಳನ್ನು ಬಳಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.