Menu-bar-icon

ಬಿ.ಕ್ಲಿಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ವಿ

ಕಾರ್ಯಕ್ರಮದ ಅರ್ಜಿಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

ಮೊದಲನೇ ಭಾಗ
01

(ಈ ಬಾಗ) ನಿಮ್ಮ ಮಾಹಿತಿಗಾಗಿ

ಎರಡನೇ ಭಾಗ
02

ಅರ್ಜಿದಾರರು ಭರ್ತಿ ಮಾಡಬೇಕಾದ ಮುಖ್ಯ ಭಾಗ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಪೇಕ್ಷಿಸುವ ಅರ್ಜಿದಾರರನ್ನು ಈ ಭಾಗದಲ್ಲಿ ಮೂವರು ವ್ಯಕ್ತಿಗಳು ಶಿಫಾರಸು ಮಾಡಬೇಕು. ಮಾಹಿತಿ ಒದಗಿಸುವ ಸ್ಥಳಗಳನ್ನು ಶಿಫಾರಸು ಮಾಡುವ ವ್ಯಕ್ತಿಗಳೆ ತುಂಬಬೇಕು. ಅರ್ಜಿದಾರರು ಇವನ್ನು ಭರ್ತಿ ಮಾಡಕೂಡದು.

ಮೂರನೇ ಭಾಗ
03

ತಮ್ಮ ಹೆಸರನ್ನು ಶಿಫಾರಸ್ಸು ಮಾಡುವ 100 ಜನರ - ಹೆಸರು, ದೂರವಾಣಿ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ಸಹಿಯನ್ನು ಇಲ್ಲಿ ನಮೂದಿಸಬೇಕು

ಅರ್ಜಿಯನ್ನು ಅಂತರ್ಜಾಲದ ಮೂಲಕ ಸಲ್ಲಿಸಲು:

ಈ ಅರ್ಜಿ ನಮೂನೆಯು ಬಿ.ಪ್ಯಾಕ್ ಅಂತರ್ಜಾಲ ತಾಣದಲ್ಲಿ ಲಭ್ಯವಿರುವುದು. ಅರ್ಜಿದಾರರ ಎಲ್ಲಾ ಮಾಹಿತಿಗಳನ್ನು ಭಾಗ 2ರಲ್ಲಿ ಭರ್ತಿ ಮಾಡಬೇಕು. ಆದರೆ, ಅರ್ಜಿದಾರರನ್ನು ಶಿಫಾರಸು ಮಾಡಿ ಬೆಂಬಲಿಸುವ ಭಾಗವನ್ನು ತುಂಬಬಾರದು. ಈ ಶಿಫಾರಸು ಭಾಗ ಮತ್ತು ಭಾಗ 3 (ನೂರು ಜನ ಮತದಾರರ ಪಟ್ಟಿ) ಇವುಗಳನ್ನು ಸ್ಕ್ಯಾನ್ ಮಾಡಿ ಅರ್ಜಿಯೊಡನೆ ಸೇರಿಸಬಹುದು (uploaded) ಅಥವಾ ಬಿ.ಪ್ಯಾಕ್ ಕಚೇರಿಗೆ ಅಂಚೆ ಮೂಲಕ ತಲುಪಿಸಬಹುದು.

ಮುದ್ರಿತ ಅರ್ಜಿ ಸಲ್ಲಿಸುವವರಿಗಾಗಿ:

ಅರ್ಜಿಯನ್ನು ಬಿ.ಪ್ಯಾಕ್ ಅಂತರ್ಜಾಲ ತಾಣದಿಂದ ಮುದ್ರಿಸಿಕೊಳ್ಳಬಹುದು ಅಥವಾ ಬಿ.ಪ್ಯಾಕ್ ಕಚೇರಿಯಿಂದ ಅಥವಾ ಬಿ.ಪ್ಯಾಕ್ ಜಾಲತಾಣದಲ್ಲಿ ನಿರ್ದಿಷ್ಟಪಡಿಸಿರುವ ಸ್ಥಳಗಳಿಂದ ತೆಗೆದುಕೊಳ್ಳಬಹುದು.

ಅರ್ಜಿಯ ಭಾಗ 1 ಮಾಹಿತಿಗಾಗಿ, ಭಾಗ 2 ಮತ್ತು 3 ಅನ್ನು ಭರ್ತಿ ಮಾಡಿದ ಅರ್ಜಿಗಳನ್ನು ಅಂತರ್ಜಾಲದ ಮೂಲಕವೇ ಕಳುಹಿಸಬಹುದು (uploaded) ಅಥವಾ ಬಿ.ಪ್ಯಾಕ್ ಕಚೇರಿಗೆ ಅಂಚೆ ಮೂಲಕ ತಲುಪಿಸಬಹುದು.

ಬಿ.ಪ್ಯಾಕ್,

#4/6, ನೆಲ ಮಹಡಿ, ಮಿಲ್ಲರ್ಸ್ ರಸ್ತೆ,

ಮಣಿಪಾಲ್ ಆಸ್ಪತ್ರೆ ಎದುರು, ಬೆಂಗಳೂರು 560052

ದೂರವಾಣಿ ಸಂಖ್ಯೆ - +91-08041521797

ಯಾವುದೇ ಸಂಸ್ಥೆಯು ಹೆಚ್ಚಿನ ಅರ್ಜಿದಾರರನ್ನು ತಲುಪಲು ನಮಗೆ ಸಹಾಯ ಮಾಡಲು ಬಯಸಿದರೆ, ದಯವಿಟ್ಟು ಇ-ಮೇಲ್ ಅನ್ನು ಕಳುಹಿಸುವ ಮೂಲಕ ನಮಗೆ ತಿಳಿಸಿ: bclip@bpac.in

ನಾವು ನಿಮಗೆ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲೂ ಅರ್ಜಿಗಳನ್ನು ಅಂಚೆಯ ಮೂಲಕ ತಲುಪಿಸುತ್ತೇವೆ.

ಅರ್ಜಿ ಸಲ್ಲಿಸಲು ಇರುವ ನಿಬಂಧನೆಗಳು.

  • ತಮ್ಮ ವಾರ್ಡ್ ನ ಬಿಬಿಎಂಪಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹತೆ ಹೊಂದಿರಬೇಕು
  • ಚುನಾವಣೆಯಲ್ಲಿ ಸ್ಪರ್ಧಿಸಲು ಕಾನೂನಿನ ತೊಡಕುಗಳು ಇರಬಾರದು.
  • ಅಭ್ಯರ್ಥಿಯ ಮೇಲೆ ಯಾವುದೇ ಅಪರಾಧ ಮೊಕದ್ದಮೆ ಇರಬಾರದು ಮತ್ತು/ಅಥವಾ ನ್ಯಾಯಾಲಯದಿಂದ ಯಾವುದೇ ರೀತಿಯ ಗುರುತರ ಆಪಾದನೆ ಹೊರೆಸಿ ಶಿಕ್ಷೆಗೆ ಗುರಿಮಾಡಿರಬಾರದು
  • ಅಭ್ಯರ್ಥಿಯನ್ನು ಬೆಂಬಲಿಸುವ ಅವರ ವಾರ್ಡ್ ನ ನೂರು ಜನ ಮತದಾರರು ತಮ್ಮ ಹೆಸರು, ಸಂಪರ್ಕ ಸಂಖ್ಯೆ, ಮತದಾರರ ಗುರುತು ಚೀಟಿಯ ಸಂಖ್ಯೆಯನ್ನೊಳಗೊಂಡು ಸಹಿ ಮಾಡಿರುವ ಪಟ್ಟಿಯನ್ನು ಹಾಜರುಪಡಿಸಲೇಬೇಕು.
  • ಅಭ್ಯರ್ಥಿಯು ತನ್ನ ಸಾಮರ್ಥ್ಯ, ನಂಬಿಕೆಗರ್ಹತೆ, ಸಮಗ್ರತೆ ಮತ್ತು ಸ್ವಯಂ ಮೌಲ್ಯವನ್ನು ಕುರಿತು ತಾನು ನಡೆದು ಬಂದ ರೀತಿನೀತಿ/ದಾರಿಯ ಬಗ್ಗೆ ಪರಿಚಯ ನೀಡಬೇಕು.
  • ಅಭ್ಯರ್ಥಿ ಪ್ರತಿನಿಧಿಸುವ ವಾರ್ಡ್ ನಲ್ಲಿ ಈ ಹಿಂದೆ ನೆಡೆಸಿರುವ ನಾಗರಿಕ ಚಟುವಟಿಕೆಗಳು ಮತ್ತು ಸಾರ್ವಜನಿಕ ಸೇವೆಯ ಕುರಿತು ದಾಖಲೆ ಸಹಿತ ಮಾಹಿತಿ ಪ್ರದರ್ಶಿಸಬೇಕು.

ಸೂಚನೆ

  • Ø ಈ ಮೇಲಿನ ಮಾನದಂಡಗಳನ್ನು ಹೊಂದಿರುವ ಯಾರಾದರೂ ಅರ್ಜಿ ಸಲ್ಲಿಸಬಹುದು.
  • Ø ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ.
  • Ø ಸದ್ಯ ನಗರಪಾಲಿಕೆ ಸದಸ್ಯರಾಗಿರುವವರೂ ಅರ್ಜಿ ಸಲ್ಲಿಸಬಹುದು.
  • Ø ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಸಾಮಾನ್ಯವಾಗಿ ಏಳುವ ಪ್ರಶ್ನೆಗಳು

  • ಪ್ರ: ಈ ಕಾರ್ಯಕ್ರಮಕ್ಕೆ ಏನಾದರೂ ಶುಲ್ಕವಿದೆಯೇ?

    ಉ: ಕಾರ್ಯಕ್ರಮಕ್ಕೆ ಆಯ್ಕೆಯಾದ ಅಭ್ಯರ್ಥಿಗಳು, ಹಿಂದಿರುಗಿಸಲಾಗುವ ರೂ. 5000/- ಭದ್ರತಾ ಠೇವಣಿ ಹಣವನ್ನು ನೀಡಬೇಕು. ಯಶಸ್ವಿಯಾಗಿ ಮುಗಿಸುವ ಅಭ್ಯರ್ಥಿಗಳಿಗೆ ಈ ಹಣವನ್ನು ಹಿಂದಿರುಗಿಸಲಾಗುತ್ತದೆ. ಯಾವ ಅಭ್ಯರ್ಥಿಗಳಿಗೆ ಈ ಹಣವನ್ನು ನೀಡಲು ಅಸಮರ್ಥತೆ ಇರುತ್ತದೋ, ಅಂತಹವರಿಗೆ ಆರ್ಥಿಕ ಸಹಾಯವನ್ನು ಮಾಡಲಾಗುತ್ತದೆ.

  • ಪ್ರ: ನಾನು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ, ಭವಿಷ್ಯದಲ್ಲಿ ಬಿ.ಪ್ಯಾಕ್ ನನ್ನನ್ನು ಬೆಂಬಲಿಸುವುದೇ/ಸೂಚಿಸುವುದೇ?

    ಉ: ಅಭ್ಯರ್ಥಿಗಳನ್ನು ಬಿ.ಪ್ಯಾಕ್ ಬೆಂಬಲಿಸಿ ಸೂಚಿಸುವುದು ಈ ಕಾರ್ಯಕ್ರಮವನ್ನು ಹೊರತುಪಡಿಸಿದ ಸಂಪೂರ್ಣ ಸ್ವತಂತ್ರ ನಿರ್ಧಾರ.

  • ಪ್ರ: ಈ ಕಾರ್ಯಕ್ರಮ ಯಾವುದಾದರೂ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಯಲ್ಲಿ ಅಂಗೀಕರಿಸಲ್ಪಟ್ಟಿದೆಯೇ? ಈ ಕಾರ್ಯಕ್ರಮವನ್ನು ಪೂರೈಸುವ ನನಗೆ ಏನಾದರೂ ಪ್ರಮಾಣಪತ್ರ ಕೊಡಲಾಗುವುದೇ?

    ಉ: ಈ ಕಾರ್ಯಕ್ರಮ ಯಾವುದೇ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಯಿಂದ ಅಂಗೀಕರಿಸಲ್ಪಟ್ಟಿಲ್ಲ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸುವ ಅಭ್ಯರ್ಥಿಗಳಿಗೆ ತಕ್ಷಶಿಲಾ ಪ್ರಮಾಣಪತ್ರವನ್ನು ನೀಡುತ್ತದೆ.

  • ಪ್ರ: ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ನನಗೇನಾದರೂ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕೇ?

    ಉ: ನಿಮಗೆ ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಇರಬೇಕಾದ ಅವಶ್ಯಕತೆ ಇಲ್ಲ. ಈ ಕಾರ್ಯಕ್ರಮಕ್ಕೆಂದು ಸೂಚಿಸಲಾಗಿರುವ ಮಾನದಂಡಗಳ ಅರ್ಹತೆಯನ್ನು ಪೂರೈಸುವ ಯಾರೆ ಆಗಲಿ ಅರ್ಜಿ ಸಲ್ಲಿಸಬಹುದು.

  • ಪ್ರ: ನಾನು ಬೆಂಗಳೂರಿನಲ್ಲಿ ನೋಂದಾಯಿತ ಮತದಾರರಲ್ಲದಿದ್ದರೂ, ನಾನು ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದೇ?

    ಉ: ಈ ಕಾರ್ಯಕ್ರಮವು ಬೆಂಗಳೂರಿನ ನೋಂದಾಯಿತ ಮತದಾರರಿಗೆ ಮಾತ್ರ ತೆರೆದಿರುತ್ತದೆ.

  • ಪ್ರ: ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಇದೆಯೇ?

    ಉ: ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಾವುದೇ ವಯೋಮಿತಿ ಇಲ್ಲ. ಆದರೆ, ಈ ಕಾರ್ಯಕ್ರಮಕ್ಕೆ ನಿರ್ದಿಷ್ಟಪಡಿಸಿರುವ ಮಾನದಂಡಗಳನ್ನು ಪೂರೈಸುವ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು.

  • ಪ್ರ. ತರಬೇತಿ ಎಲ್ಲಿ ನಡೆಯಲಿದೆ?

    ಉ: ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ತರಬೇತಿ ನಡೆಯಲಿದೆ.