ಹೊಸ ಪರ್ವದೆಡೆಗೆ ಹೆಜ್ಜೆ ಹಾಕುತ್ತಿರುವ ಮಾದರಿ ಕಾರ್ಪೋರೇಟರ್

ಬೆಂಗಳೂರಿನಂತಹ ಮಹಾನಗರದಲ್ಲಿ , ಜನಸಾಮಾನ್ಯರ ಸೇವೆಗಾಗಿ ಹಲವಾರು ನಾಯಕರು ಶ್ರಮಿಸಿದ್ದಾರೆ. ಬದಲವಣೆಯ ಚುಕ್ಕಾಣಿ ಹಿಡಿದಿರಿವ ಹಲವು ಜನನಾಯಕರಲ್ಲಿ ಉಮೇಶ ಶೆಟ್ಟಿಯವರು ಕೂಡ ಒಬ್ಬರು, ಜನಸಾಮಾನ್ಯರ ನಡುವೆಯೇ ನಿಂತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ತನ್ನೊಂದಿಗೆ ಇತರೆ ನಾಯಕರನ್ನೂ ಬೆಂಬಲಿಸುತ್ತಾ, ಸಮಾಜಸೇವಕರಿಗೆ, ಜನಪರ ನಾಯಕರಿಗೆ ಹಾಗು ಯುವಸಮುದಾಯಗಳಿಗೆ ಬೆನ್ನೆಲುಬಾಗಿ ನಿಂತ್ತಿದ್ದಾರೆ. ಬಿ.ಪ್ಯಾಕ್ ಸಂಸ್ಥೆಯು ಗೋವಿಂದರಾಜನಗರ ನಗರ ವಾರ್ಡಿನಲ್ಲಿ ಹಮ್ಮಿಕೊಂಡಿದ್ದ ಬಹಯತೇಕ ಕಾರ್ಯಕ್ರಮಗಳಿಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸುತ್ತ ಬಂದ್ದಿದ್ದಾರೆ. ಪರಿಸರಸ್ನೇಹಿ ಗಣೇಶ ಚತುರ್ಥಿಯನ್ನು ಆಚರಿಸಲು ಹಾಗು ಪಿ.ಒ.ಪಿ ಗಣೇಶಗಳ ಬಳಿಕೆಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ [...]