B.CLIP 6 Field visit2018-12-11T11:10:13+05:30

B.CLIP 6 Field visit

ಬೆಂಗಳೂರು, ನವೆಂಬರ್-25
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಅತಿ ದೊಡ್ಡ ಸಮಸ್ಯೆಗಳಲ್ಲಿ ಪ್ರಮುಖವಾದದ್ದು ಟ್ರಾಫಿಕ್ ಹಾಗೂ ಪಾರ್ಕಿಂಗ್. ದಿನಕ್ಕೆ ಸಾವಿರಾರು ಹೊಸ ನೋಂದಣಿ ವಾಹನಗಳು ರಸ್ತೆಗೆ ಇಳಿಯುತ್ತದೆ. ರಸ್ತೆಗಳು ಆಗೆಯೇ ಇದೆ, ಬೆಂಗಳೂರಿನ ವಿಸ್ತಿರ್ಣವು ಆಗೆಯೇ ಇದೆ, ಆದರೆ ವಾಹನಗಳೂ ಹಾಗೂ ಜನಸಂಖ್ಯೆ ಮಾತ್ರ ಹೆಚ್ಚಾಗುತ್ತಿವೆ, ಈ ರೀತಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನಗಳಿಗೆ ಕಡಿವಾಣ ಹಾಕುವುದು ಸುಲಭದ ವಿಷಯವಲ್ಲ, ಎಲ್ಲರಲ್ಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಲು ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಅನೇಕ ಕಾರಣಗಳಿಂದ ಖಾಸಗಿ ವಾಹನಗಳನ್ನು ಉಪಯೋಗಿಸಲೆ ಬೇಕಾದ ಪರಿಸ್ಥಿತಿ ಇದೆ.
 ಟ್ರಾಫಿಕ್ ಜಾಮ್ ಎಂಬುವುದು ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಬೆಂಗಳೂರಿನ ವಾಹನ ಸವರರು ಒಂದರಿಂದ ಎರಡು ಗಂಟೆಗಳ ಕಾಲ ಟ್ರಾಫಿಕ್‍ನಲ್ಲಿ ಕಳೆಯುತ್ತಾರೆ, ಆಗೆಯೇ ಪಾರ್ಕಿಂಗ್ ಕೂಡ ಬಹುದೊಡ್ಡ ಸಮಸ್ಯೆ ಬೆಂಗಳೂರಿನಲ್ಲಿ, ಅದು ಸಿಟಿಯ ಭಾಗವಾದ ಮೆಜೆಸ್ಟಿಕ್, ಆನಂದ ರಾವ್ ಸರ್ಕಲ್, ಪ್ರೀಡಂ ಪಾರ್ಕ್ ಸುತ್ತಮುತ್ತಲು ಪಾರ್ಕಿಂಗ್ ಸಮಸ್ಯೆಯು ತಾರಕಕ್ಕೇರಿದೆ. ಬಿ.ಬಿ.ಎಂ.ಪಿ.ಯು ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆಗಳನ್ನು ನಿವಾರಿಸಲು ಹಲವಾರು
ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಒಕಳಿಪುರಂ ಸರ್ಕಲ್ ನಲ್ಲಿ ನಿರ್ಮಾಣವಾಗುತ್ತಿರುವ 8 ಪಥಗಳ ಕಾರಿಡಾರ್ ಹಾಗೂ ಸ್ವಾತಂತ್ರ್ಯ ಉದ್ಯಾನವನದ ಬಳಿ ಹಲವಾರು ನಿರ್ಮಾಣವಾಗುತ್ತಿರುವ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಪ್ರಮುಖವಾದದ್ದು.
 ಬಿ.ಬಿ.ಎಂ.ಪಿ.ಯು ಬೃಹತ್ ಕಾಮಗಾರಿ ನಡೆಸುತ್ತಿದ್ದಾರೆ ಎಂದರೆ ಸಾಮಾನ್ಯ ಪ್ರಜೆಗಳಲ್ಲಿ ಹಲವಾರು ಪ್ರಶ್ನೆಗಳು ಉದ್ಬವಿಸುತ್ತದೆ, ಈ ಬೃಹತ್ ಕಾಮಗಾರಿಗೆ ಯಾವ ರೀತಿ ಪ್ಲಾನ್ ರೆಡಿ ಮಾಡುತ್ತಾರೆ, ಜಾಗಗಳನ್ನು ಹೇಗೆ ವಶಪಡಿಸಿಕೊಳ್ಳುತ್ತಾರೆ, ಈ ಬೃಹತ್ ಕಾಮಗಾರಿ ಅವಶ್ಯಕತೆ ಇತ್ತ, ಕಾಮಗಾರಿಗೆ ಎಷ್ಟು ಹಣವನ್ನು ಮಂಜೂರು ಮಾಡುತ್ತಾರೆ ಎಂದು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ಬಿ.ಕ್ಲಿಪ್ 6 ನೇ ಆವೃತ್ತಿಯ ಅಭ್ಯರ್ಥಿಗಳು ಕ್ಷೇತ್ರ ವಿಕ್ಷಣೆಗೆಂದು ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಹಾಗೂ ಒಕಳಿಪುರಂ ಬಳಿ ಇರುವ ಎಂಟು ಪಥಗಳ ರಸ್ತೆಯ ನಿರ್ಮಾಣದ ಯೋಜನೆಗೆ ಬೇಟಿ ಮಾಡಿ ಕಾಮಮಗಾರಿಯ ಬಗ್ಗೆ ತಿಳಿದುಕೊಂಡರು.
ಮೊದಲು ಸ್ವಾತಂತ್ರ್ಯ ಉದ್ಯಾನವನದ ಬಳಿ ನಿರ್ಮಾಣವಾಗುತ್ತಿರುವ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಬಳಿ ಬಿ.ಕ್ಲಿಪ್ ಆರನೇ ಆವೃತ್ತಿಯ ಅಭ್ಯರ್ಥಿಗಳು ಕ್ಷೇತ್ರ ವೀಕ್ಷಣೆಗೆ ಬೇಟಿ ನೀಡಿದರು, ಈ ಪಾರ್ಕಿಂಗ್ ಕಾಮಗಾರಿಯು ಬೆಂಗಳೂರು ನಗರದಲ್ಲಿ ಅತಿ ದೊಡ್ಡ ಕಾರ್ ಹಾಗೂ ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಾಗಲಿದೆ.
ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಮೂರು ಅಂತಸ್ತಿನ ಕಾರ್ ಪಾರ್ಕಿಂಗ್ ವ್ಯವಸ್ಥೆಯಾಗಿದ್ದು ಸುಮಾರು 536 ಕಾರುಗಳು ಹಾಗೂ 410 ದ್ವಿಚಕ್ರವಾಹನಗಳು ನಿಲ್ಲಬಹುದು, ಈ ಪಾರ್ಕಿಂಗ್ ಸಂಪೂರ್ಣವಾಗಿ ನಿರ್ಮಾಣವಾದ ನಂತರ ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾರ್ಕಿಂಗ್ ಸಮಸ್ಯೆಯು ಎದುರಾಗುವುದಿಲ್ಲ ಹಾಗೂ ಸ್ವಾತಂತ್ರ್ಯ ಉದ್ಯಾನವನದಲ್ಲಿ ಚಳಿವಳಿ ಮತ್ತು ಪ್ರತಿಭಟನೆಗಳು ನಡೆದರೆ ಬಸ್‍ಗಳಿಗಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಸುಮಾರು 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯು ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸುತ್ತದೆ ಎಂದು ಬಿ.ಬಿ.ಎಂ.ಪಿಯ ಮುಖ್ಯ ಅಭಿಯಂತರಾದ ಶ್ರೀ ಕೆ.ಟಿ.ನಾಗರಾಜ್ ರವರು ಬಿ.ಕ್ಲಿಪ್ ನಾಯಕರುಗಳಿಗೆ ತಿಳಿಸಿದರು.
ಆಗೇ ಸ್ವಾತಂತ್ರ್ಯ ಉದ್ಯಾನವನದ ಪಾರ್ಕಿಂಗ್ ಕಾಮಗಾರಿಯನ್ನು ತಿಳಿದ ಬಿ.ಕ್ಲಿಪ್ ಅಭ್ಯರ್ಥಿಗಳು ಗಾಂಧಿನಗರದ ಟೆಂಡರ್ ಶೊರ್ ರಸ್ತೆಗಳ ಯೋಜನೆಯ ಕಾರ್ಯವೈಖರಿ ಹಾಗೂ ಅದರ ಅನುಕ್ರಮಗಳನ್ನು ಅಧ್ಯಯನ ಮಾಡುತ್ತ ಓಕಳಿಪುರಂನಲ್ಲಿರುವ 8 ಪಥಗಳ ರಸ್ತೆಯನ್ನು ವಿಕ್ಷಿಸಲು ತೆರಳಿದರು, ಬಿ.ಕ್ಲಿಪ್ ಅಭ್ಯರ್ಥಿಗಳ ಜೊತೆ ಬಿ.ಬಿ.ಎಂ.ಪಿ ಅಧಿಕಾರಿಗಳಾದ ಕೆ.ಟಿ.ನಾಗರಾಜ್ ಹಾಗೂ ಬಸವರಾಜ್ ಕಬಾಡೆಯವರು ಜೊತೆಯಲ್ಲಿದ್ದು ಪ್ರತಿ ಯೋಜನೆಯನ್ನು ಹಂತ ಹಂತವಾಗಿ ವಿವರಿಸುತ್ತಿದ್ದರು.
ಮೊದಲು ಓಕಳಿಪುರಂ ಎಂಟು ಪಥಗಳ ಕಾಮಗಾರಿಯನ್ನು ವಿಕ್ಷಿಸಿ, ಇಷ್ಟು ದೊಡ್ಡ ಮಟ್ಟದ ಕಾಮಗಾರಿ ಅನುಷ್ಠಾನದ ಬಗ್ಗೆ ಮಾಹಿತಿಯನ್ನು ಕಲೆಹಾಕಿದರು. ಈ ಕಾಮಗಾರಿಯು ಬಿ.ಬಿ.ಎಂ.ಪಿ ಹಾಗೂ ನೈರುತ್ಯ ರೈಲ್ವೆ ಇಲಾಖೆಯ ಜಂಟಿ ಕಾಮಗಾರಿಯಾಗಿದ್ದು, ಬೆಂಗಳೂರು ನಗರದ ಸದ್ಯದ ಬೃಹತ್ ಕಾಮಗಾರಿಯಲ್ಲಿ ಒಂದಾಗಿದೆ. ಕರ್ನಾಟಕ ಸರ್ಕಾರದ ನಗರೋತ್ತಾನ ಯೋಜನೆಯ ಅನುಧಾನದ 108 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಬೃಹತ್ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
 ಯೋಜನೆ ರೂಪಿಸುವ ಮೊದಲು ನಾವು ಸಂಪೂರ್ಣ ಯೋಜನೆಯ ವರದಿ (ಡಿ.ಪಿ.ಆರ್) (Detailed Project Report) ಹಾಗೂ ಬ್ಲೂ ಪ್ರಿಂಟ್(ನಕಾಶೆ)ಯನ್ನು ರೆಡಿ ಮಾಡಿಕೊಳ್ಳುತ್ತೇವೆ ತದನಂತರ ಟೆಂಡರ್ ಪ್ರಕ್ರಿಯೆಯನ್ನು ಮುಗಿಸಿದ ನಂತರ ಕಾಮಗಾರಿಯನ್ನು ಕೈಗೊಳ್ಳುತ್ತೇವೆ, ಪ್ರತಿ ಬೃಹತ್ ಕಾಮಗಾರಿಯಲ್ಲು ಅದರದೇ ಆದ ಪ್ರಕ್ರಿಯೆಯನ್ನು ಅನುಸರಿಸುತ್ತೇವೆ ಎಂದು ಬಿ.ಬಿ.ಎಂ.ಪಿ. ಅಧಿಕಾರಿಯಾದ ಕೆ.ಟಿ.ನಾಗರಾಜ್ ರವರು ತಿಳಿಸಿದರು.
ಬಿ.ಕ್ಲಿಪ್ ಅಭ್ಯರ್ಥಿಗಳ ಹಲವಾರು ಗೊಂದಲಗಳಿಕೆ ಹಾಗೂ ಪ್ರಶ್ನೆಗಳಿಗೆ ಅಧಿಕಾರಿಗಳು ಶಾಂತರೀತಿಯಲ್ಲಿ ಉತ್ತರಿಸುತ್ತ, ಗೊಂದಲಗಳಿಗೆ ತೆರೆ ಎಳೆದರು.
ರಾಘವೇಂದ್ರ ಹೆಚ್ ಎಸ್