ಬೆಂಗಳೂರಿನಂತಹ ಮಹಾನಗರದಲ್ಲಿ , ಜನಸಾಮಾನ್ಯರ ಸೇವೆಗಾಗಿ ಹಲವಾರು ನಾಯಕರು ಶ್ರಮಿಸಿದ್ದಾರೆ. ಬದಲವಣೆಯ ಚುಕ್ಕಾಣಿ ಹಿಡಿದಿರಿವ ಹಲವು ಜನನಾಯಕರಲ್ಲಿ ಉಮೇಶ ಶೆಟ್ಟಿಯವರು ಕೂಡ ಒಬ್ಬರು, ಜನಸಾಮಾನ್ಯರ ನಡುವೆಯೇ ನಿಂತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ತನ್ನೊಂದಿಗೆ ಇತರೆ ನಾಯಕರನ್ನೂ ಬೆಂಬಲಿಸುತ್ತಾ, ಸಮಾಜಸೇವಕರಿಗೆ, ಜನಪರ ನಾಯಕರಿಗೆ ಹಾಗು ಯುವಸಮುದಾಯಗಳಿಗೆ ಬೆನ್ನೆಲುಬಾಗಿ ನಿಂತ್ತಿದ್ದಾರೆ.

ಬಿ.ಪ್ಯಾಕ್ ಸಂಸ್ಥೆಯು ಗೋವಿಂದರಾಜನಗರ ನಗರ ವಾರ್ಡಿನಲ್ಲಿ ಹಮ್ಮಿಕೊಂಡಿದ್ದ ಬಹಯತೇಕ ಕಾರ್ಯಕ್ರಮಗಳಿಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸುತ್ತ ಬಂದ್ದಿದ್ದಾರೆ. ಪರಿಸರಸ್ನೇಹಿ ಗಣೇಶ ಚತುರ್ಥಿಯನ್ನು ಆಚರಿಸಲು ಹಾಗು ಪಿ.ಒ.ಪಿ ಗಣೇಶಗಳ ಬಳಿಕೆಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಅರಿವು ಮೂಡಿಸಲು ಮನೆ ಮನೆಗು ಮಣ್ಣಿನ ಗಣಪ (ಗ್ರೀನ್ ಗಣೇಶ), ನೀರಿನ ಮಿತಬಳಿಕೆಯ ಬಗ್ಗೆ ಜಾಗೃತಿ ಮೂಡಿಸಲು (ಗ್ರೀನ್ ಅಂಬಾಸಿಡರ್), ‘ಜಲೋತ್ಸವ’ ದಂತ ಇನ್ನು ಹಲವಾರು ಕಾರ್ಯಕ್ರಮಗಳಿಗೆ,ಬಿ.ಪ್ಯಾಕ್‍ನ , ಬಿ.ಕ್ಲಿಪ್ ಸಿವಿಕ್ ಲೀಡರ್ ಜ್ಯೋತಿ ಚೌದರಿ ಅವರೊಂದಿಗೆ ಒಡಗೂಡಿ ಯಶಸ್ವಿಗೊಳಿಸಿದ್ದಾರೆ.

ಮೂಲತ: ತುಳುನಾಡಿನವರಾದ ಉಮೇಶರವರು, ತಮ್ಮ 25ನೇ ವಯ್ಯಸ್ಸಿನಲ್ಲಿ ಸಮಾಜಪರ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಭಾರತಿಯ ಜನತಾ ಪಕ್ಷದಲ್ಲಿ ಸಕ್ರಿಯವಾಗಿದ್ದ ಇವರು 2010ರ ಬೃಹತ್ತ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದರು. ಪ್ರಸ್ತುತ ಗೋವಿಂದರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗೋವಿಂದರಾಜನಗರದ ಕಾರ್ಪೋರೆಟರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ವಾರ್ಡಿನ ಸಮಸ್ಯೆಗಳ ಆಳ ಅಗಲವನ್ನು ಗಮನಿಸಿದ ಉಮೇಶರವರಿಗೆ ಕಸದ ನಿರ್ವಹಣೆ ದೊಡ್ಡ ಸವಾಲಾಗಿ ಕಂಡಿತ್ತು.
ದೃತ್ತಿಗೆಡದೆ, ಅದ್ದನ್ನು ತಮ್ಮದೆ ವಿಭಿನ್ನ ಶೈಲಿಯಲ್ಲಿ ಪರಿಹರಿಸಲ್ಲು ಮುಂದಾಗಿ ಅದರಲ್ಲಿ ನಿರೀಕ್ಷಿತ ಯಶಸ್ಸನ್ನು ಕಂಡಿದ್ದಾರೆ. ವಾರ್ಡಿನಲ್ಲಿರುವ 30 ಬ್ಲಾಕ್ ಸ್ಪಾಟ್‍ಗಳನ್ನು ಗುರುತಿಸಿಲಾಯಿತು, ತಲಾ ಒಂದೊಂದು ಸಿ.ಸಿ.ಟಿ.ವಿ ಯನ್ನು ಈ ಸ್ಥಳಗಳಲ್ಲಿ ಅಳವಡಿಸಲಾಯಿತ್ತು. ಗುರುತಿಸಿದ ಸ್ಥಳಗಳಲ್ಲಿ ಕಸ ನಿಷೇದವಿರುವ ಫಲಕಗಳನ್ನು ಹಾಕಲಾಯಿತು, ಆದರೆ ,ಎಂದಿನಂತೆ ಸರ್ವಾಜನಿಕರು, ನಿಷೇದವಿದ್ದರು ಕಸ ಎಸದರು. ಕಸ ಎಸೆಯುವಾಗ ಸಿ.ಸಿ.ಟಿ.ವಿ ಯಲ್ಲಿ ಸೆರೆಯಾದವರ ಭಾವಚಿತ್ರವನ್ನು ಬ್ಯಾನರ್‍ನಲ್ಲಿ ಹಾಕಾಲಾಯಿತು. ಮುಜುಗರಕ್ಕೆ ಒಳಗಾದ ಹಲವರು ಕಸ ಹಾಕುವುದ್ದನ್ನು ನಿಲ್ಲಿಸಿದರು, ಇದರ ಪರಿಣಾಮ, ಕ್ರಮೇಣ ಬಡವಣೆಯಲ್ಲಿ ಕಸದ ಸಮಸ್ಯೆ ನಿವಾರಣೆಯಾಯಿತು.
ಇದಲ್ಲದೆ ಕಸ ವಿಲೇವಾರಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬಿ.ಪ್ಯಾಕ್‍ನ ಸಹಭಾಗಿತ್ವದ್ದಲ್ಲಿ ವಾರ್ಡಿನ ಪ್ರತಿ ಮನೆಗು ತೆರಳಿ ಅರಿವು ಮೂಡಿಸಿದ್ದಾರೆ. ವಾರ್ಡಿನ ಸರ್ಕಾರಿ ಶಾಲೆಗಳಿಗೆ ತೆರಳಿ ‘ ಬಿ.ಪ್ಯಾಕ್‍ನ ಸಹಕಾರದಿಂದ ದೊರೆತ ‘ಚಿಣ್ಣರ ಗಣಿತ’ ಪುಸ್ತಕವನ್ನು ಪ್ರತಿಯೊಬ್ಬ ವಿಧ್ಯಾರ್ಥಿಗು ತಲುಪಿಸುವಲ್ಲಿ ನೆರವಾಗಿದ್ದಾರೆ. ಸಮಸ್ಯೆ ಎಂದು ಯಾರೇ ಬಂದರೂ ಅದನ್ನು ಪರಿಶೀಲಿಸಿ
ತಕ್ಕ ಪರಿಹಾರ ಒದಗಿಸಿದ್ದಾರೆ.

ನಗರದಲ್ಲಿ ಕಸದ ಸಮಸ್ಯೆ ಹೊರತುಪಡಿಸಿ ಪ್ರತಿಯೊಬ್ಬ ಸವಾರನ ನಿದ್ದೆಗೆಡಿಸುವ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಅದು ಹದಗೆಟ್ಟ ರಸ್ತೆಗಳು. ಸರಿಯಾದ ಪ್ರಮಾಣದಲ್ಲಿ ಡಾಂಬರೀಕರಣವಾಗದೆ ರಸ್ತೆಗಳು ಹದಗೆಡುತ್ತವೆ. ಇದ್ದಕ್ಕೆ ಪ್ರತ್ಯುತ್ತರವೆಂಬಂತೆ ಉಮೇಶರವರು ಗೋವಿಂದರಾಜನಗರದ ಮುಖ್ಯರಸ್ತೆಯೊಂದಕ್ಕೆ ಹೊಸ ರೊಪ ಕಲ್ಪಿಸಿಕೊಡುತ್ತಿದ್ದಾರೆ. ಟೆಂಡರ್ ಶ್ಯುರ್ ರಸ್ತೆಯ ಮಾದರಿಯಲ್ಲಿ ವಿನ್ಯಾಸಗೊಳ್ಳುತಿರುವ ಈ ರಸ್ತೆಯು ಹಲವು ಹೊಸತನಗಳಿಂದ ಕೂಡಿದೆ. ಮೊದಲೆನೆಯದಾಗಿ ಇದು ಟೆಂಡರ್ಶ್ಯೂರ್ ರಸ್ತೆಗಳ ಅರ್ಧಕ್ಕಿಂತ ಕಡಿಮೆ ವೆಚ್ಚದ್ದಲಿ ತಯಾರಾಗುತ್ತಿದೆ.

ಒಂದು ಕಿಮಿನಷ್ಟು ಉದ್ದವಿರುವ ಈ ರಸ್ತೆಯ ಕಾಮಗಾರಿಗೆ ತಗುಲಿರುವ ವೆಚ್ಚ ಕೇವಲ ಒಂದುವರೆ ಕೋಟಿ. ಈ ರಸ್ತೆಯು ಹಲವು ವೈಶಿಷ್ಟ್ಯಗಳಿಂದ ಕೂಡಿದೆ, ರಸ್ತೆಯ ಎರಡೂ ಬದಿಯಲ್ಲಿ ವಿಶಾಲವಾದ ಪಾದಚಾರಿ ಮಾರ್ಗ, ಪ್ರತ್ಯೇಕವಾದ ಪಾರ್ಕಿಂಗ್ ವ್ಯವಸ್ಥೆ, ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸಲಾಗಿದೆ ಹಾಗು ಪಾದಚಾರಿಮಾರ್ಗದ ಆಸುಪಾಸಿನಲ್ಲಿ ಕಂಬಗಳನ್ನು ಸ್ಥಾಪಿಸಿದ್ದು, ರಸ್ತೆಗೆ ಹೊಸ ಮೆರುಗನ್ನು ತಂದುಕೊಟ್ಟಿದೆ. ಪಾದಚಾರಿಗಳ ಸುಗಮ ಸಂಚಾರಕ್ಕೆ ಪಾದಚಾರಿ ಮಾರ್ಗದಲ್ಲಿ ಬೀದಿ ಬದಿ ವ್ಯಾಪರವನ್ನು
ಸಂಪೂರ್ಣವಾಗಿ ನಿಷೇದಿಸಿಲಾಗಿದೆ.ಹೀಗೆ ಹಲವಾರು ಸೌಲಭ್ಯಗಳನ್ನು ಹೊಂದಿರುವ “ಮಾದರಿ ರಸ್ತೆಯು” (Model Road) ಪ್ರಸ್ತುತ ಕಾಮಗಾರಿ ಹಂತದಲ್ಲಿದ್ದು, ಶೀಘ್ರವೇ ಸಂಚಾರಕ್ಕೆ ಮುಕ್ತವಾಗಲಿದೆ.

ಜನಸಾಮಾನ್ಯರಿಗೆ ಸರ್ಕಾರಿ ಕಛೇರಿಗಳ ಮೇಲಿರುವ ಮನಸ್ಥಿತಿಯನ್ನು ಬದಲಿಸುವ ನಿಟ್ಟಿನಲ್ಲಿ, ಬಿ.ಬಿ.ಎಂ.ಪಿ ವಾರ್ಡ್ ಕಛೇರಿಯನ್ನು
ವಿನೂತನ ಶೈಲಿಯಲ್ಲಿ ನಿರ್ಮಿಸುತ್ತಿದ್ದಾರೆ. ಒಟ್ಟು ಮೂರು ಅಂತಸ್ತಿನ ಮಹಡಿಯಲ್ಲಿ, ಮೀಟಿಂಗ್ ಹಾಲ್, ಪ್ರತ್ಯೇಕ ಆಫೀಸ್ರೂ ಮ್, ಪಾರ್ಕಿಂಗ್ ವ್ಯವಸ್ಥೆ ಹಾಗೂ ವಿಶಾಲವಾದ ಯೋಗ ಕೇಂದ್ರವನ್ನು ಈ ಕಛೇರಿ ಒಳಗೊಂಡಿದೆ. ಕ್ರೀಡಾಸಕ್ತರಿಗೆ ಹೊಸ ಕ್ರೀಡಾಂಗಣವೊಂದು ನಿರ್ಮಿಸಲಾಗುತ್ತಿದ್ದು, ಬಿಲಿಯಡ್ರ್ಸ, ಬ್ಯಾಡಮಿಂಟನ್, ಟೇಬಲ್ ಟೆನ್ನಿಸ್, ಹೈಟೆಕ್
ಜಿಮ್ ಒಳಗೊಂಡಿದೆ. ಒದುಗರಿಗೆ ಲೈಬ್ರರಿ ಹಾಗು ಸಂಘ ಸಂಸ್ಥೆಗಳಿಗೆ ಪ್ರತ್ಯೇಕ್ ಕೊಠಡಿಯನ್ನು ಒದಗಿಸಲಾಗಿದೆ. ಸಾರ್ವಾಜನಿಕರ ಹಿತಾಸಕ್ತಿಯ ಸಲುವಾಗಿ ಕಡಿಮೆ ದರದಲ್ಲಿ ಚಿಕಿತ್ಸೆ ಒದಗಿಸುವ ಡೈಯಾಲಿಸಿಸ್ ಸೆಂಟರ್ ಹಾಗು ಉಚಿತ ಸೇವೆ ನೀಡುವ ಆಂಬುಲೆನ್ಸನ್ನು ಒದಗಿಸಿದ್ದಾರೆ.

ಸಮಾಜಮುಖಿ ಕಾರ್ಯಗಳಲ್ಲಿ ತಮನ್ನು ತೊಡಗಿಸಿಕೊಂಡು ನವಸಮಾಜ ನಿರ್ಮಾಣದ ಹಾದಿ ತುಳಿದಿರುವ ಉಮೇಶ ಶೆಟ್ಟಿಯವರಿಗೆ ಬಿ.ಪ್ಯಾಕ್ ಶುಭಕೊರುತ್ತದೆ.